ಎಪಿಎಂ.ಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮಾಣಿ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ನೇಮಿರಾಜ ರೈ ಯವರ ಅಭಿನಂದನಾ ಸಭೆ ಕಲ್ಲಡ್ಕದ ಪಂಚವಟಿ ಸಭಾಂಗಣದಲ್ಲಿ ನಡೆಯಿತು.
https://bantwalnews.com report
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಈ ಗೆಲುವು ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿತ ಹೋರಾಟ ಮಾಡಲು ಸಹಕಾರಿಯಾಗುತ್ತದೆ. ಪಕ್ಷದ ಎಲ್ಲಾ ಕಾರ್‍ಯಕರ್ತರ ಹುರುಪಿನ ಕೆಲಸದಿಂದ ಎಪಿಎಂಸಿ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆ ಮಾಡಲು ಸಾಧ್ಯವಾಯಿತು. ಕಾರ್‍ಯಕರ್ತರು ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಜನರಿಗೆ ತಿಳಿಸುವ ಕೆಲಸ ಮಾಡಬೇಕಾಗಿದೆ. ಅ ಮೂಲಕ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದರು.