ಈ ಶವದ ವಾರೀಸುದಾರರು ಯಾರೆಂದು ಹೇಗೂ ಗೊತ್ತಿಲ್ಲ, ಸರ್ಕಾರಿ ಆಸ್ಪತ್ರೆಯಲ್ಲೂ ಶವಕ್ಕೆ ಜಾಗ ದೊರಕದೆ ಖಾಸಗಿ ಆಸ್ಪತ್ರೆಯನ್ನು ಆಶ್ರಯಿಸಬೇಕಾಯಿತು.
ಇದು ಬಿ.ಸಿ.ರೋಡ್ ಸಮೀಪ ತಲಪಾಡಿ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ದೊರಕಿದ ಅಪರಿಚಿತ ಪುರುಷನ ಶವದ ಸ್ಥಿತಿ.
www.bantwalnews.com report
ಬುಧವಾರ ಸ್ಥಳೀಯ ನಿವಾಸಿಗಳು ನೇತ್ರಾವತಿ ನದಿಯಲ್ಲಿ ತೇಲುತ್ತಿರುವುದನ್ನು ಕಂಡು ಕೂಡಲೇ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರು.
ತಕ್ಷಣವೇ ನಗರ ಠಾಣೆ ಪೊಲೀಸರು ಧಾವಿಸಿ ಬಂದು ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸಹಕಾರದಲ್ಲಿ ಶವವನ್ನು ಮೇಲೆತ್ತಿದರು. ಈ ಸಂದರ್ಭ ಇದು ಸುಮಾರು 45ರಿಂದ 50ರ ಹರೆಯದ ಕಪ್ಪು ಪ್ಯಾಂಟು ಧರಿಸಿದ್ದ ಅಪರಿಚಿತ ಗಂಡಸಿನ ಶವ ಎಂದು ಅಂದಾಜಿಸಲಾಯಿತು. ಕೂಡಲೇ ಅದನ್ನು ಮಂಗಳೂರು ವೆನ್‌ಲಾಕ್ ಶವಾಗಾರಕ್ಕೆ ಕಳುಹಿಸಲಾಯಿತು.
ಆದರೆ ಮಂಗಳೂರು ವೆನ್ ಲಾಕ್ ನ ಶವಾಗಾರದವರೆಗೆ ಹೋದ ಶವ ಮರಳಿ ಪೊಲೀಸರ ಬಳಿಯೇ ಬಂತು!
ಕೊನೆಗೆ ಪೊಲೀಸರು ಶವವನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಖಾಸಗಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…