ಬಿ.ಸಿ.ರೋಡಿನ ರಂಗೋಲಿ ಹೋಟೆಲ್ ಹೊರಾಂಗಣದಲ್ಲಿ ಎಡನೀರು ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ ಭಾಗವತಿಕೆಯಲ್ಲಿ ಹಿಡಿಂಬ – ಕೀಚಕ- ಉತ್ತರ ಎಂಬ ಬಯಲಾಟ ಸಂಜೆ 6ರಿಂದ ರಾತ್ರಿ 11ವರೆಗೆ ನಡೆಯಲಿದೆ.
www.bantwalnews.com report
ಯಕ್ಷಮಿತ್ರರು ಕೈಕಂಬ, ಬಿ.ಸಿ.ರೋಡ್ ಆಶ್ರಯದಲ್ಲಿ ನಡೆಯುವ ಈ ಯಕ್ಷಗಾನದಲ್ಲಿ ಸನ್ಮಾನ ಸಮಾರಂಭವೂ ನಡೆಯಲಿದ್ದು, ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು ಅವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭ ಉದ್ಯಮಿ ಸತೀಶ್ ಭಂಡಾರಿ ಕಳತ್ತಬೆಟ್ಟು, ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್ ಉಪಸ್ಥಿತರಿರುವರು ಎಂದು ಯಕ್ಷಮಿತ್ರರು ಕೈಕಂಬ ಪರವಾಗಿ ಸದಾಶಿವ ಕೈಕಂಬ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…