www.bantwalnews.com report
ಬಂಟ್ವಾಳ ತಾಲೂಕಿನ ಗಡಿ ಭಾಗವಾದ ಕರೋಪಾಡಿಯ ಅರಸಳಿಕೆಯ ವಿಘ್ನರಾಜ ಭಟ್ ಎಂಬವರ ಮನೆಗೆ ಮಂಗಳವಾರ ಬೆಳಗ್ಗೆ ಸುಮಾರು 2ರಿಂದ 4ಗಂಟೆಯ ವೇಳೆಗೆ ಸುಮಾರು 9ರಷ್ಟಿದ್ದ ತಂಡ ನುಗ್ಗಿ ಮನೆಯವರನ್ನು ಬೆದರಿಸಿ, ನಿಧಿ ಶೋಧ ಮಾಡಿದೆ.
ಸುಮಾರು 20ರಿಂದ 35 ವರ್ಷದೊಳಗಿನವರಿದ್ದ ಈ ತಂಡದಲ್ಲಿ 9 ಮಂದಿ ಇದ್ದರು. ಮನೆಯಲ್ಲಿ ವಿಘ್ನರಾಜ ಭಟ್ ಮತ್ತು ಅವರ ಅಳಿಯ ಮಾತ್ರವೇ ಇದ್ದ ಸಂದರ್ಭ ಅವರಿಬ್ಬರನ್ನು ಕಟ್ಟಿ ಹಾಕಿ, ನಿಧಿ ಎಲ್ಲಿದೆ ಎಂದು ಕೇಳಿದರು. ಬಳಿಕ ಮನೆಯ ಪಕ್ಕದಲ್ಲಿ ಹೊಂಡ ಮಾಡಿ ಅಗೆದು ನಿಧಿಗಾಗಿ ಹುಡುಕಿ ಬರಿಗೈಯಲ್ಲಿ ಮರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಮಾಹಿತಿ ದೊರಕಿದ ತಕ್ಷಣ ವಿಟ್ಲ ಪಿಎಸ್ ಐ ನಾಗರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸೂಕ್ತ ಬಂದೋಬಸ್ತ್ ಕೈಗೊಂಡರು.
ಇನ್ನೋವಾ ಕಾರಿನಲ್ಲಿ ಬಂದಿದ್ದ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…