ಸಪ್ತರಾಜ್ಯದಲ್ಲಿ ಸಂಚರಿಸಿದ ಮಂಗಲಗೋಯಾತ್ರೆಯ ಆವಾಹನಾ ರಥ ಯಾತ್ರೆ ಜ.26ರಂದು ವಿಟ್ಲಕ್ಕೆ ಆಗಮಿಸುತ್ತಿದ್ದು, ಸಂಜೆ 6.30 ಕ್ಕೆ ಉಕ್ಕುಡದಲ್ಲಿ ರಥವನ್ನು ಸ್ವಾಗತಿಸಿ ವಾಹನ ಜಾತಾ ಮೂಲಕ ವಿಟ್ಲ ಪೇಟೆಯ ಮುಖ್ಯ ರಸ್ತೆಯಲ್ಲಿ ಸಂಚರಿಸಿ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂಜೆ 7ಕ್ಕೆ ಸಂತ ಸುರಭಿ ಕಾರ್ಯಕ್ರಮ ನಡೆಯಲಿದೆ ಎಂದು ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಸೇರಾಜೆ ಹೇಳಿದರು.
www.bantwalnews.com report
ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ಬಾಳೆಕೋಡಿ ಶ್ರೀ ಕಾಶೀಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ವಿಟ್ಲ ಅರಮನೆಯ ವಿ. ಜನಾರ್ಧನ ವರ್ಮ ಅರಸರು ಗೌರವ ಉಪಸ್ಥಿತರಿರಲಿದ್ದಾರೆ. ಅಧ್ಯಕ್ಷತೆಯನ್ನು ಮಂಗಲಗೋಯಾತ್ರೆಯ ವಿಟ್ಲ ಸಮಿತಿ ಅಧ್ಯಕ್ಷ ಅರುಣ ವಿಟ್ಲ ವಹಿಸಲಿದ್ದಾರೆ. ಆವಾಹನಾ ರಥಯಾತ್ರೆ ಜಿಲ್ಲಾ ಸಂಯೋಜಕ ಸತ್ಯಜಿತ್ ಸುರತ್ಕಲ್ ಭಾಗವಹಿಸಲಿದ್ದಾರೆಂದು ವಿಟ್ಲದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ರಾಜಕೀಯ ರಹಿತವಾಗಿ ಸಂತರು ಹಾಗೂ ಗೋಪ್ರೇಮಿಗಳು ಭಾಗವಹಿಸುವ ಕಾರ್ಯಕ್ರಮವಾಗಿದ್ದು, ಗೋರಕ್ಷಣೆಯಾಗಬೇಕು ಮತ್ತು ಗೋ ರಕ್ಷಕನಿಗೆ ರಕ್ಷಣೆ ಸಿಗಬೇಕೆಂಬ ನಿಟ್ಟಿನಲ್ಲಿ ಯಾತ್ರೆ ನಡೆಯುತ್ತಿದೆ. ರಕ್ಷಿಸಲ್ಪಟ್ಟ ಗೋವುಗಳಿಗೆ ವ್ಯವಸ್ಥೆಯ ನಿಟ್ಟಿನಲ್ಲಿ ಗೋ ಬ್ಯಾಂಕ್ ನಿರ್ಮಾಣ, ಗವ್ಯ ಉತ್ಪನ್ನಗಳ ಸ್ಪಷ್ಟವಾದ ಮಾಹಿತಿಯನ್ನು ನೀಡಲಾಗುತ್ತದೆ. 29ಕ್ಕೆ ಕಾರ್ಯಕ್ರಮ ನಿಲ್ಲೋದಿಲ್ಲ ಆರಂಭವಾಗುವುದು. ಗೋ ಹತ್ಯೆ ನಿಷೇಧ ಕಾಯಿಲೆ ಜಾರಿಗೆ ಬರುವವರೆಗೆ ಅಭಿಯಾನದ ರೀತಿಯಲ್ಲಿ ನಡೆಯುತ್ತಿರುತ್ತದೆ ಎಂದು ತಿಳಿಸಿದರು.
ರಾಮಚಂದ್ರಾಪುರ ಮಠದ ಮೇಲೆ ಸತತವಾಗಿ ಸವಾರಿಗಳು ನಡೆಯುತ್ತಿದೆಮಠ ಇದನ್ನು ಇವತ್ತಿನವ ವರೆಗೆ ಎದುರಿಸಿದ್ದು, ಮುಂದೆಯೂ ಎದುರಿಸಲು ಸಿದ್ದವಿದೆ. ಮಠ ಎಲ್ಲಿಯೂ ಸೋಲಲಿಲ್ಲ, ಸೋಲುವುದೂ ಇಲ್ಲ. ನಾವು ಸದಾ ಮಠದ ಜತೆಗೆ ಇದ್ದೇವೆ ಎಂದು ಹೇಳಿದರು.
ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಜಿಗಳವರ ವಿಶೇಷ ಕಲ್ಪನೆಯ ಮೂಲಕ ರಾಜ್ಯದ ಸಂತರೆಲ್ಲರನ್ನು ಸೇರಿಸಿಕೊಂಡು ಎಲ್ಲರ ನೇತೃತ್ವದಲ್ಲಿ ಮಂಗಲಗೋಯಾತ್ರೆ ನಡೆಯುತ್ತಿದೆ. ಜ.27, 28, 29ರಂದು ಮಂಗಳೂರಿನ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮಂಗಲ ಭೂಮಿಯಲ್ಲಿ ರಾಷ್ಟ್ರಮಟ್ಟದ ಕಾರ್ಯಮ ನಡೆಯಲಿದೆ. 1ಸಾವಿರಕ್ಕೂ ಅಧಿಕ ಸಂತರು ಈ ಕಾರ್ಯಕ್ರಮದಲ್ಲಿ ಸೇರಲಿದ್ದು, ಜಿಲ್ಲೆಯಲ್ಲೇ ಮೊದಲ ಕಾರ್ಯಕ್ರಮವಾಗಿ ನಡೆಯುತ್ತಿದೆ. ಇದಕ್ಕಾಗಿ ಸುಮಾರು 100 ಎಕ್ರೆ ಜಾಗವನ್ನು ಸಿದ್ದ ಪಡಿಸಲಾಗಿದ್ದು, 65 ಎಕ್ರೆ ವಿವಿಧ ಕಾರ್ಯಕ್ರಮಗಳಿಗೆ ಸಭಾಂಗಣಗಳು ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ಜ.27ರಂದು ಸಂಜೆ ಗೋದೋಳಿ ಲಗ್ನದಲ್ಲಿ ಮಂಗಳೂರಿಗೆ ಗೋಯಾತ್ರೆ ತಲುಪಲಿದ್ದು, ಗೋಜ್ಯೋತಿ ಬೆಳಗುವ ಮೂಲಕ ಮಂಗಲ ಭೂಮಿಯ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಜ.28 ರಂದು ಬೆಳಗ್ಗೆಯಿಂದ ವೈಜ್ಞಾನಿಕ ಚರ್ಚಾ ಗೋಷ್ಠಿಗಳು ಸಂಜೆವರೆಗೆ ನಡೆಯಲಿದ್ದು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಜ.29ರಂದು ಬೆಳಗ್ಗೆ 10 ರಿಂದ ಸಂತ ಸುರಭಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಮಂಗಲ ಭೂಮಿಯ ಸಭಾಭವನದಲ್ಲಿ ಸುಮಾರು 60 ಸಾವಿರ ಮಂದಿಗೆ ಆಸನ ವ್ಯವಸ್ಥೆಯನ್ನು ಮಾಡಿದ್ದು, ವೇದಿಕೆಯಲ್ಲಿ 1500 ಮಂದಿ ಸಂತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕಾಗಿ ಕಾರ್ಯಕ್ರಮ ನಡೆಸುತ್ತಿರುವುದಲ್ಲ, ಜನ ಸೇರಿಸುವ ಕಾರ್ಯಕ್ರಮವೂ ಇದಲ್ಲ, ದೇಶೀ ತಳಿ ಗೋವನ್ನು ಉಳಿಸಿ ಬೆಳೆಸುವ ಜತೆಗೆ ಗೋ ಸಂತತಿ ಕಟುಕರ ಪಾಲಾಗುವುದನ್ನು ರಕ್ಷಿಸುವ ಉದ್ದೇಶದಿಂದ ಗೋ ಹತ್ಯ ನಿಷೇಧ ಕಾನೂನು ಜಾರಿಯಾಗಬೇಕೆಂದು ಸರ್ಕಾರದಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ದೊಡ್ಡ ಉದ್ದೇಶದಿಂದ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ವಿಟ್ಲ ಸೀಮಾ ಗೋಯಾತ್ರಾ ಸಮಿತಿ ಅಧ್ಯಕ್ಷ ಅರುಣ ಎಂ ವಿಟ್ಲ ಮಾತನಾಡಿ ವಿಟ್ಲ ಹೆಚ್ಚಿನ ಮನೆಗಳಿಗೆ ಅಕ್ಷತಾ ಅಭಿಯಾನದ ಮೂಲಕ ಸರ್ವಧರ್ಮದವರನ್ನೂ ಆಮಂತ್ರಿಸಲಾಗಿದೆ. ಜ.26ರಂದು ಮಧ್ಯಾಹ್ನ ಮಹಾ ಮಗಲ ಕಾರ್ಯಕ್ರಮಕ್ಕೆ ಹಸಿರುಹೊರೆಕಾಣಿಕೆ ಸಮರ್ಪಿಸಲು ಅವಕಾಶವಿದ್ದು, ಗೋ ಪ್ರೇಮಿಗಳು ನೀಡುವ ವಸ್ತುವನ್ನು ಮಧ್ಯಾಹ್ನ 3 ಗಂಟೆಗೆ ಪಂಚಲಿಂಗೇಶ್ವರ ದೇವಾಲಯಕ್ಕೆ ತಲುಪಿಸಬಹುದಾಗಿದೆ. ಸಂಜೆ ದೇವಳದಲ್ಲಿ ನಡೆಯುವ ಕಾರ್ಯಕ್ರಮಕ್ಕೆ 2 ಸಾವಿರ ಮಂದಿ ಸೇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮಂಗಳೂರಿನ ಜ.29 ರ ಕಾರ್ಯಕ್ರಮಕ್ಕೆ ವಿಟ್ಲ ಪರಿಸರದ ವಿವಿಧ ಕೇಂದ್ರಗಳಿಂದ 10 ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ಸುಮಾರು 7 ಸಾವಿರ ಮಂದಿ ಭಾಗವಹಿಸಬಹುದು ಎಂದು ಹೇಳಿದರು.
ವಿಟ್ಲ ಸೀಮಾ ಗೋಯಾತ್ರಾ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಭಟ್ ಪಡಾರು, ವಿಟ್ಲ ಹವ್ಯಕ ವಲಯ ದಿಗ್ದರ್ಶಕ ಸತೀಶ್ ಪಂಜಿಗದ್ದೆ ಉಪಸ್ಥಿತರಿದ್ದರು.