ವಿಟ್ಲ ಶ್ರೀ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಪ್ರಯುಕ್ತ ನಡೆದ ವಿ.ಆರ್.ಸಿ ವಿಟ್ಲ ವತಿಯಿಂದ ರಮಾನಾಥ ವಿಟ್ಲ ಸಾರಥ್ಯದಲ್ಲಿ ನಡೆದ ವಿಟ್ಲೋತ್ಸವ ಕಾರ್ಯಕ್ರಮದಲ್ಲಿ ವಾಯ್ಸ್ ಆಫ್ ಮ್ಯೂಸಿಕ್ ಮಂಗಳೂರು ಇದರ ರಾಜೇಶ್ ಮತ್ತು ಬಳಗದ ನಡೆಸಿಕೊಟ್ಟ ಸಂಗೀತ ರಸ ಮಂಜರಿ ಪ್ರೇಕ್ಷಕರ ಗಮನ ಸೆಳೆಯಿತು.
ಸಭಾ ಕಾರ್ಯಕ್ರಮದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಿವೃತ್ತ ಅರ್ಚಕ ವಾಸುದೇವ ಕೆದಿಲಾಯ ಹಾಗೂ ದೇವಸ್ಥಾನದ ಸ್ವಯಂ ಸೇವಕ ರಾಜೇಶ್ ಬೊಬ್ಬೆಕೇರಿ ಅವರನ್ನು ಸನ್ಮಾನಿಸಲಾಯಿತು.
ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ರವೀಶ್ ಸಿ.ಆರ್ ಮಾತನಾಡಿ ಸಮಯಗಳನ್ನು ಒಳ್ಳೆಯ ಕಾರ್ಯಗಳಿಗೆ ಮೀಸಲಿಟ್ಟಾಗ ಹಾಗೂ ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿದಾಗ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಶುಭ ಹಾರೈಸಿದರು.
ವಿಟ್ಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಅನಂತಕೃಷ್ಣ ಹೆಬ್ಬಾರ್ ಮಾತನಾಡಿ ವಿಟ್ಲ ಜಾತ್ರೋತ್ಸವ ವೇಳೆ ನಡೆಯುತ್ತಿರುವ ವಿವಿಧ ಸಾಂಸ್ಕೃತಿಕ ಕಾರ್ಯಗಳಿಂದಾಗಿ ವಿಟ್ಲ ಜಾತ್ರೆ ಪ್ರಸಿದ್ಧಿ ಪಡೆದಿದೆ ಎಂದು ತಿಳಿಸಿದರು.
ನಿವೃತ್ತ ಕಮಾಟೆಂಟ್ ಚಂದಪ್ಪ ಮೂಲ್ಯ, ರಮಾನಾಥ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.
ನಟೇಶ್ ವಿಟ್ಲ ನಿರೂಪಿಸಿ, ಸ್ವಾಗತಿಸಿದರು. ಅಶೋಕ್ ವಿಟ್ಲ ಸಹಕರಿಸಿದರು.