ವಿಟ್ಲ ಶ್ರೀ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ನಡೆಯುವ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಶನಿವಾರ ರಾತ್ರಿ ವೈಭವದ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖ ನಡೆಯಿತು.
www.bantwalnews.com report
ವಿಟ್ಲ ಅರಮನೆಯ ಅನುವಂಶೀಯ ಆಡಳಿತದಾರರಾದ ವಿ.ಜನಾರ್ದನ ವರ್ಮ, ಕೃಷ್ಣಯ್ಯ ಕೆ., ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್.ಎನ್. ಕುಡೂರು ಸೇರಿದಂತೆ ಹಲವು ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾದರು.
ಜನವರಿ 14ರಂದು ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿತ್ತು. ಅಂದು ಧ್ವಜಾರೋಹಣದಿಂದ ಆರಂಭವಾಗಿ ಒಂಭತ್ತು ದಿನ ಉತ್ಸವಾದಿಗಳು ನಡೆದವು. 14ರಂದು ಶನಿವಾರ ಲಕ್ಷದೀಪೋತ್ಸವ , 15, 16, 17ರಂದು ಸಂಜೆ 6.30ಕ್ಕೆ ನಿತ್ಯೋತ್ಸವಗಳು
18ರಂದು ಬಯ್ಯದ ಬಲಿ ಉತ್ಸವ, 19ರಂದು ತೆಪ್ಪೋತ್ಸವ, 20ರಂದು ಹೂತೇರು ಉತ್ಸವ ನಡೆದಿದ್ದವು. ಪ್ರತಿದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರೋತ್ಸವಕ್ಕೆ ಕಳೆಗಟ್ಟಿದ್ದವು..
ಭಾನುವಾರ ಅವಭೃತ ಸ್ನಾನ, 24ರಂದು ಕೇಪುವಿನ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ. 25ರಂದು ಅರಮನೆಯಲ್ಲಿ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ ಬಳಿಕ ಕೇಪುವಿಗೆ ಭಂಡಾರ ಹೊರಡುವುದು ನಡೆಯಲಿದೆ.