ಬದ್ರೀಯ್ಯಿನ್ ಜುಮಾ ಮಸೀದಿ ಪುದುಪೇಟೆ ಮಾರಿಪಳ್ಳ ಇದರ ವತಿಯಿಂದ ಶಂಶುಲ್ ಉಲಮಾ ಇಸ್ಲಾಮಿಕ್ ಪಳ್ಳಿ ದರ್ಶ್‌ನ 17ನೆ ವಾರ್ಷಿಕೋತ್ಸವ, ಎರಡು ದಿನಗಳ ಮತ ಪ್ರಭಾಷಣ, ಕುರ್‌ಆನ್ ಹಾಫೀಝ್‌ಗಳು ಮತ್ತು ಉಲಮಾಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಮಾರಿಪಳ್ಳದಲ್ಲಿ ಜರಗಿತು.
www.bantwalnews.com report
ಸಮಸ್ತ ಕೇರಳ ಜಮಿಯ್ಯತುಲ್ ಉಲಮಾದ ಕಾರ್ಯದರ್ಶಿ ಪ್ರೋಫೆಸರ್ ಆಲಿಕುಟ್ಟಿ ಮುಸ್ಲಿಯಾರ್ ದುಅ ಮೂಲಕ ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು.
ಖ್ಯಾತ ವಾಗ್ಮಿ ಹಾಫಿಝ್ ಇ.ಕೆ.ಅಬೂಬಕ್ಕರ್ ನಿಝಾಮಿ ಮಲೇಶ್ಯ ಮುಖ್ಯ ಪ್ರಭಾಷಣಗೈದರು. ಮಾರಿಪಳ್ಳ ಜುಮಾ ಮಸೀದಿಯ ಅಧ್ಯಕ್ಷ ಸಿ.ಮಹಮೂದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುರ್‌ಆನ್ ಹಾಫೀಝ್‌ಗಳು ಹಾಗೂ ಉಲಮಾಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಆಹಾರ ಸಚಿವ ಯು.ಟಿ.ಖಾದರ್, ಚೆಂಗಳಂ ಅಬ್ದುಲ್ಲ ಫೈಝಿ ಮಸ್ಕತ್, ಮಾಜಿ ಜಿಪಂ ಸದಸ್ಯ ಎಫ್.ಉಮರ್ ಫಾರೂಕ್, ಮೆಟ್ರೊ ಬೀಡೀಸ್ ಗುರುಪುರ ಇದರ ಶಾಹುಲ್ ಹಮೀದ್ ಹಾಜಿ, ಸುಲ್ತಾನ್ ಬೀಡಿ ವರ್ಕ್ಸ್ ಕೊಡಾಜೆ ಇದರ ಹಾಜಿ ಹುಸೈನ್ ಕೊಡಾಜೆ, ಗುರುಪುರ ಮದರಸ ಮೆನೇಜ್‌ಮೆಂಟ್ ಅಧ್ಯಕ್ಷ ನೌಶಾದ್ ಹಾಜಿ, ಅಲಂಕಾರ್ ಬೀಡಿ ವರ್ಕ್ಸ್ ಫರಂಗಿಪೇಟೆ ಇದರ ಯೂಸುಫ್, ವಳಚ್ಚಿಲ್ ಕೇಂದ್ರ ಜುಮಾ ಮಸೀದಿಯ ಗೌರವಾಧ್ಯಕ್ಷ ಝಫ್ರುಲ್ಲಾ ಒಡೆಯರ್, ಫಿಶ್ ಮರ್ಚೆಂಟ್ ವಳಚ್ಚಿಲ್ ಇದರ ಇಸ್ಮಾಯೀಲ್, ಮೌಲವಿ ಅಹ್ಮದ್ ಸಿ. ಸಿರಾಜ್, ಮಾಜಿ ತಾಪಂ ಸದಸ್ಯ ಆಸಿಫ್ ಇಕ್ಬಾಲ್, ಮಾರಿಪಳ್ಳ ರೇಸ್ಕ್ಯು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಮಾರಿಪಳ್ಳ ಜುಮಾ ಮಸೀದಿಯ ಉಪಾಧ್ಯಕ್ಷರಾದ ಕೆ.ಬಾವ, ಅಬ್ದುಲ್ ಕರೀಂ, ಕೋಶಾಧಿಕಾರಿ ಎಂ.ಹುಸೈನ್, ಕವಿ ಮುಹಮ್ಮದ್ ಮಾರಿಪಳ್ಳ, ಪುದು ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಹಾಶೀರ್, ಸದಸ್ಯ ರಮ್ಲಾನ್ ಮೊದಲಾದವರು ಉಪಸ್ಥಿತರಿದ್ದರು.
ಮುಹಮ್ಮದ್ ಸಿರಾಜ್ ಕಿರಾಅತ್ ಪಠಿಸಿದರು. ಮಾರಿಪಳ್ಳ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಪಿ. ಸ್ವಾಗತಿಸಿದರು.