ಭಾವನೆಗಳನ್ನು ತಮ್ಮ ಅನುಭವಗಳ ಮೂಲಕ ವಿಶ್ಲೇಷಿಸಿ ಜ್ಞಾನವನ್ನಾಗಿ ಪರಿವರ್ತಿಸಿದಾಗ ಅದು ಒಳ್ಳೆಯ ಕೃತಿಯಾಗಿ ರೂಪುಗೊಳ್ಳುತ್ತದೆ ಎಂದು ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅನಂತಕೃಷ್ಣ ಹೇಳಿದರು.
www.bantwalnews.com report
ಮಂಗಳೂರಿನ ಡಾನ್‌ಬಾಸ್ಕೊ ಮಿನಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಪ್ರಕಾಶನ ಹೊರತಂದಿರುವ ಎಸ್.ವಿ.ಎಸ್. ಕಾಲೀಜಿನ ನಿವೃತ್ತ ಪ್ರಾಧ್ಯಾಪಕ ರಾಜಮಣಿ ರಾಮಕುಂಜ ಅವರ ’ಕಿಟಕಿಯಾಚೆ’ ಎಂಬ ಲೇಖನ ಸಂಗ್ರಹವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಎಸ್.ವಿ.ಎಸ್. ಕಾಲೀಜಿನ ನಿವೃತ್ತ ಪ್ರಾಂಶುಪಾಲ ಶಂಕರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕದ್ರಿ ಕೆಪಿಟಿಂ ನಿವೃತ್ತ ಪ್ರಾಚಾರ್ಯ ವಿಷ್ಣು ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೃತಿಕಾರರಾದ ರಾಜಮಣಿ ರಾಮಕುಂಜ ಉಪಸ್ಥಿತರಿದ್ದರು. ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿ, ಕಾಸರಗೋಡು ಅಶೋಕ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.