www.bantwalnews.com report
ಬದುಕಿದಷ್ಟು ಕಾಲ ಬೇರೆಯವರಿಗೆ ತಿರಸ್ಕಾರವಾಗದೆ, ಶಾಪವಾಗದೆ, ಭಾರವಾಗದೆ, ಬದುಕಿದವರು ರಾಮನುಜಾಚಾರ್ಯರು. ನಾವು ಜೀವನದಲ್ಲಿ ಇನ್ನೊಬ್ಬರಿಗೆ ಸ್ವೀಕಾರ್ಯರಾಗಬೇಕು. ನಮ್ಮನ್ನು ಇನ್ನೊಬ್ಬರು ಒಪ್ಪುವಂತವರಾಗಬೇಕು. ಎಲ್ಲಾ ವ್ಯಕ್ತಿತ್ವ, ಭಗವಂತನ ಭಕ್ತಿ, ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆ ಎಲ್ಲಿ ಇರುತ್ತದೆಯೋ ಅಲ್ಲಿ ಜಾತಿ ಅಗತ್ಯವಿರುವುದಿಲ್ಲ. ಎಂದು ಅ.ಭಾ ಕುಟುಂಬ ಪ್ರಬೋಧನ್‌ನ ಪ್ರಮುಖರಾದ, ಸಂಘದ ಹಿರಿಯ ಪ್ರಚಾರಕರಾದಂತಹ ಸು ರಾಮಣ್ಣ ಹೇಳಿದರು.
ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪ್ರಭಾಸ ಮಾನವಿಕ ಸಂಘವು ಆಯೋಜಿಸಿದ ಶ್ರೀ ರಾಮಾನುಜಾಚಾರ್ಯ ನೆನಪು ಮತ್ತು ಸಂದೇಶ ಎಂಬ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ|ಪ್ರಭಾಕರ ಭಟ್, ಸಂಸ್ಥೆಯ ಸಂಚಾಲಕರು ವಸಂತ ಮಾಧವ, ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಕೃಷ್ಣಪ್ರಸಾದ ಕಾಯರ್ ಕಟ್ಟೆ ಸ್ವಾಗತಿಸಿ, ಉಪನ್ಯಾಸಕರಾದ ಹರೀಶ ವಂದಿಸಿ, ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…