ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ ಕ್ಷೇತ್ರದ ತಂತ್ರಿ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ಅರ್ಮುಡ್ತಾಯ ಅವರ ಸಹಕಾರದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗುರುವಾರ ಸಂಪನ್ನಗೊಂಡಿತು.
bantwalnews.com report
ವಿವಿಧ ಬ್ಯಾಂಡ್ ವಾದ್ಯಗಳು, ಚೆಂಡೆ ವಾದನ,ಕೀಲು ಕುದುರೆ, ಗೊಂಬೆ, ಸ್ತಬ್ಧ ಚಿತ್ರ,ಹುಲಿ ವೇಷಗಳೊಂದಿಗೆ ಮೆರವಣಿಗೆಯಲ್ಲಿ ಶ್ರೀ ದೇವರ ಪೇಟೆ ಸವಾರಿ ಮತ್ತು ಕಟ್ಟೆಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
ಜ.18ರಂದು ಬೆಳಗ್ಗೆ ಕವಾಟೋದ್ಘಾಟನೆ, ದಿವ್ಯದರ್ಶನ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಎಲ್.ಸಿ.ಆರ್.ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು ಇವರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.ಬಳಿಕ ಉತ್ಸವ,ದೈವಗಳ ನೇಮ, ಮಹಾರಥೋತ್ಸವ ನಡೆಯಿತು.ಮಧ್ಯಾಹ್ನ ಶ್ರೀ ಸತ್ಯಸಾಯಿ ಸೇವಾ ಸಮಿತಿ ಮತ್ತು ಶಿವಾಜಿ ಫ್ರೆಂಡ್ಸ್ ಕಕ್ಯ ಅವರ ವತಿಯಿಂದ ಸಾವಿರಾರು ಭಕ್ತಾಧಿಗಳಿಗೆ ಮಜ್ಜಿಗೆ ವಿತರಣೆ ನಡೆಯಿತು.
ಜ.19ರಂದು ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆಯೊಂದಿಗೆ ಮಂಗಳ. ಕಕ್ಯಬೀಡು ಮೂಲ ಚಾವಡಿಗೆ ನೇಮ ಭಂಡಾರ ನಿರ್ಗಮಿಸಿತು.
ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ,ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು,ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್,ಚಂದ್ರಪ್ರಕಾಶ್ ಶೆಟ್ಟಿ,ಪ್ರಮುಖರಾದ ಜಗದೀಶ್ ಅಽಕಾರಿ,ಪಿಯೂಸ್ ಎಲ್.ರೊಡ್ರಿಗಸ್,ದೇವಳದ ಜೀರ್ಣೋದ್ಧಾರ ಸಮಿತಿಯ ಸ್ಥಾಪಕಾಧ್ಯಕ್ಷ ಕೆ.ಜಾರಪ್ಪ ಶೆಟ್ಟಿ ಖಂಡಿಗ, ಬಾರ್‍ದಡ್ ಗುತ್ತಿನ ಮನೆಯ ರಾಜವೀರ ಮೂಡಬಿದಿರೆ,ಅಧ್ಯಕ್ಷ ಯು. ದಾಮೋದರ ನಾಯಕ್,ಪೂರ್ವಾಧ್ಯಕ್ಷ ಜಯ ಶೆಟ್ಟಿ ಕಿಂಜಾಲು,ಉಪಾಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್,ಕಾರ್ಯದರ್ಶಿ ನಾರಾಯಣ ರೈ,ಬೆಳ್ತಂಗಡಿ ತಾ.ಪಂ.ಸದಸ್ಯೆ ಕೇಶವತಿ,ಎ.ಚೆನ್ನಪ್ಪ ಸಾಲಿಯಾನ್, ಡಾ|ಸತ್ಯಶಂಕರ ಶೆಟ್ಟಿ,ಡಾ| ರಾಜರಾಮ ಕೆ.ಬಿ.,ಕೆ.ಹರೀಶ್ಚಂದ್ರ ಪೂಜಾರಿ,ಬೇಬಿ ಕುಂದರ್,ವಿದ್ಯಾ ಚಂದ್ರಹಾಸ ಶೆಟ್ಟಿ,ವಾಸುದೇವ ಭಟ್,ನಾರಾಯಣ ಹೊಳ್ಳ,ರವಿ ಕಕ್ಯಪದವು,ರೇಖಾ ಮನೀಷ್ ರೈ,ಜಯರಾಜ ಹೆಗ್ಡೆ ಪುತ್ತಿಲ,ಸಂಪತ್ ಕುಮಾರ್ ಶೆಟ್ಟಿ,ದಯಾನಂದ ಶೆಟ್ಟಿ ಅಮೈ,ದೀನಾಕ್ಷಿ ಮಲ್ಯೋಡಿ, ರೋಹಿನಾಥ ಪಾದೆ,ಅಗ್ಪಲ ಸಂಜೀವ ಗೌಡ, ಪಿ.ರಾಮಯ್ಯ ಭಂಡಾರಿ, ಉತ್ಸವ ಸಮಿತಿ ಅಧ್ಯಕ್ಷ ಪಿ.ವಾಸುದೇವ ಮಯ್ಯ, ಉಪಾಧ್ಯಕ್ಷ ವಿಶ್ವನಾಥ ಸಾಲಿಯಾನ್ ಬಿತ್ತ,ಕಚೇರಿ ವ್ಯವಸ್ಥಾಪಕ ವೀರೇಂದ್ರ ಕುಮಾರ್ ಜೈನ್, ಜೀರ್ಣೋದ್ಧಾರ ಸಮಿತಿ, ಉತ್ಸವ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.