ಎ ಯು ಪಿ ಶಾಲೆ ಆನೆಕಲ್ಲು ಹಳೆ ವಿಧ್ಯಾರ್ಥಿ ಸಂಘ ಮತ್ತು ಗ್ರಂಥಾಲಯ- ವಾಚನಾಲಯ ನೇತೃತ್ವದಲ್ಲಿ ಶ್ರೀ ಧರ್ಮಚಕ್ರ ಟ್ರಸ್ಟ್ ರಿ., ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಆಶ್ರಯದಲ್ಲಿ ಭಾನುವಾರ ಎ ಯು ಪಿ ಶಾಲೆಯಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು.
ವರ್ಕಾಡಿ ಪಂಚಾಯತ್ ಸದಸ್ಯೆ ಸೀತಾ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉಮ್ಮರ್ ಎ. ವಹಿಸಿದ್ದರು. ಡಾ.ಎಂ ಶ್ರೀಧರ ಭಟ್ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ. ಆನಂದ ನೇತ್ರ ರಕ್ಷಣೆಯ ಮಾಹಿತಿ ನೀಡಿದರು. ಮಂಜೇಶ್ವರ ತಾಲೂಕ್ ಲೈಬ್ರರಿ ಕೌಂಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್, ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಭಟ್, ಮಂಜೇಶ್ವರ ತಾಲೂಕು ಲೈಬ್ರರಿ ಕೌಂಸಿಲೋರ್ ಶ್ರೀಕುಮಾರಿ, ಪಿಟಿಎ ಅಧ್ಯಕ್ಷರಾದ ಅಶ್ರಫ್ ಶುಭ ಹಾರೈಸಿದರು. ಅಕ್ಷತಾ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ರಾಮಕೃಷ್ಣ ಭಟ್ ಸ್ವಾಗತಿಸಿದರು. ನಾರಾಯಣರಾಜ ಟಿ.ಎಸ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶಿಬಿರದ ಅಂಗವಾಗಿ ಹಳೇ ವಿದ್ಯಾರ್ಥಿಗಳಿಗೆ ಕಬಡ್ಡಿ ಪಂದ್ಯಾಟವನ್ನು ಶನಿವಾರ ಆಯೋಜಿಸಲಾಗಿತ್ತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…