ರಸ್ತೆ ಬದಿಯ ಮರವೊಂದು ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದು ಚಾಲಕ ಹಾಗೂ ಸವಾರ ಗಂಬೀರ ಗಾಯಗೊಂಡ ಘಟನೆ ಕಲ್ಲಡ್ಕ ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಅಡ್ಯನಡ್ಕ ಪೇಟೆಯ ಸಮೀಪ ನಡೆದಿದೆ.
www.bantwalnews.com report
ರಿಕ್ಷಾ ಚಾಲಕ ಅಡ್ಯನಡ್ಕ ಕೊಲ್ಲಪದವು ಮೂಡಂಬೈಲು ನಿವಾಸಿ ಈಶ್ವರ (35), ಪ್ರಯಾಣಿಕ ರಾಮು (62) ಗಾಯಗೊಂಡಿದ್ದಾರೆ. ಮರಕ್ಕಿಣಿ ಕಡೆಯಿಂದ ಅಡ್ಯನಡ್ಕ ಪೇಟೆಗೆ ಸಂಚರಿಸುತ್ತಿದ್ದ ರಿಕ್ಷಾದ ಮೇಲೆ ಕಾಂಡ ಕ್ಷೀಣಿಸಿದ ಉಪ್ಪಳಿಗದ ಮರ ಬಿದ್ದಿದೆ. ಇದರಿಂದ ರಿಕ್ಷಾದೊಳಗಿದ್ದವರು ಅದರ ಒಳಗೆ ಸಿಲುಕಿ ಹಾಕಿಗೊಂಡು ತಲೆ ಗಂಬೀರ ಗಾಯವಾಗಿದೆ. ನಾಗರೀಕರು ರಿಕ್ಷಾದಲ್ಲಿ ಸಿಲುಕಿದವರನ್ನು ಹೊರ ತೆಗೆದು ವಿಟ್ಲ 108 ಮೂಲಕ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನು ತೆರವು ಮಾಡಿ ವಾಹನ ಸಂಚಾರ ಸುಗಮವಾಗುವಂತೆ ಮಾಡಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…