ಒಂದು ಸ್ಮರಣೀಯ ಕ್ಷಣಕ್ಕೆ ಬಂಟ್ವಾಳ ತಾಲೂಕಿನ ಗಡಿ ಭಾಗವಾದ ತಾಳ್ತಜೆ ಸಾಕ್ಷಿಯಾಯಿತು. ಶಿಷ್ಯ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಗುರು ಮಾಂಬಾಡಿ ಸಾಥ್ ನೀಡಿದ್ದು ಅಪರೂಪದ ಕ್ಷಣಗಳಲ್ಲಿ ಒಂದಾಗಿ ದಾಖಲಾಯಿತು.
www.bantwalnews.com report
ತಾಳ್ತಜೆ ಸುಬ್ರಾಯ ಭಟ್ ಪ್ರತಿಷ್ಠಾನದ ವತಿಯಿಂದ 2016-17ನೇ ಸಾಲಿನ ಯಕ್ಷ ಪ್ರಶಸ್ತಿ ಈ ಬಾರಿ ತೆಂಕುತಿಟ್ಟಿನ ಸ್ಟಾರ್ ಭಾಗವತ ಎಂದೇ ಖ್ಯಾತರಾದ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ, ಮದ್ದಳೆಗಾರ ಪದ್ಮನಾಭ ಉಪಾಧ್ಯಾಯ ಅವರಿಗೆ ಪ್ರದಾನ ಮಾಡಿ ಸನ್ಮಾನಿಸಲಾಗಿತ್ತು. ಗುರುವಾರ ನಡೆದ ಕಾರ್ಯಕ್ರಮಕ್ಕೂ ಮುನ್ನ ಕೃಷ್ಣ ಸಂಧಾನ, ಬಳಕ ಭೀಷ್ಮವಿಜಯ ತಾಳಮದ್ದಳೆ ನಡೆಯಿತು.
ಈ ಸಂದರ್ಭ ಪಟ್ಲ ಸತೀಶ ಶೆಟ್ಟಿ ಭಾಗವತಿಕೆಗೆ ಅವರ ಗುರುಗಳಾದ ಪ್ರಸಿದ್ಧ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಚೆಂಡೆ ನುಡಿಸುವ ಮೂಲಕ ಗಮನ ಸೆಳೆದರು. ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯರು ಸಹಕರಿಸಿದರು. ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ವೇದಿಕೆಯಲ್ಲಿ ಕಾರ್ಯಕ್ರಮ ನೀಡುವುದು ಇತ್ತೀಚಿನ ದಿನಗಳಲ್ಲಿ ವಿರಳ. ಹೀಗಾಗಿ ಶಿಷ್ಯ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಗುರು ಮಾಂಬಾಡಿ ಸಾಥ್ ನೀಡಿದ್ದು ಅಪರೂಪದ ಕ್ಷಣಗಳಲ್ಲಿ ಒಂದಾಗಿ ದಾಖಲಾಯಿತು. ಇದು ಸೇರಿದ್ದ ಅಪಾರ ಪ್ರೇಕ್ಷಕರಿಗೂ ರಸಾನುಭೂತಿಯನ್ನು ನೀಡಿತು. ತಾಳ್ತಜೆ ಶಂಕರನಾರಾಯಣ ಭಟ್ ಕಾರ್ಯಕ್ರಮದ ಆಯೋಜಕರಾಗಿದ್ದರು.
ಈ ರಸಮಯ ಕ್ಷಣಗಳಿಗೆ ಹಿರಿಯ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಸಾಕ್ಷಿಯಾದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…