ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ 20 ವರ್ಷಗಳ ಹಿಂದೆ ಯಾವ ಸ್ಥಿತಿ ಇದೆಯೋ ಈಗಲೂ ಹಾಗೇ ಇದೆ . ಇದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ದ.ಕ.ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಹಮ್ಮದ್ ಕುಂಞ ಹೇಳಿದರು.
www.bantwalnews.com report
ಈ ಕುರಿತು ಆರೋಗ್ಯ ಸಚಿವರು ಗಮನ ಹರಿಸಬೇಕು. ಹಿಂದಿನ ಆರೋಗ್ಯ ಸಚಿವ ಏನೂ ಮಾಡಿಲ್ಲ. ಇದಕ್ಕೆ ಸ್ಪಂದಿಸದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಯು ಟಿ ಖಾದರ್ ಅವರು ಆಸ್ಪತ್ರೆಗಳ ಮೂಲಭೂತ ಆವಶ್ಯಕತೆಗಳ ಪಟ್ಟಿಯನ್ನು ಪಡೆದುಕೊಂಡಿದ್ದು, ಆ ಪಟ್ಟಿ ಏನಾಗಿದೆ ಎಂಬ ಮಾಹಿತಿ ಇಲ್ಲ. ಜಿಲ್ಲೆಯಾದ್ಯಂತ ಆಸ್ಪತ್ರೆಗಳು ಸಂಪೂರ್ಣ ಸೊರಗಿವೆ. ಉಪಕರಣಗಳಿಗೂ ಬೇರೆ ಆಸ್ಪತ್ರೆಗಳನ್ನು ಅವಲಂಬಿಸಬೇಕಾದುದರಿಂದ ಸರ್ಕಾರಿ ಆಸ್ಪತ್ರೆಗಳಿಂದ ಯಾವುದೇ ಪ್ರಯೋಜನವಿಲ್ಲ. ಆರೋಗ್ಯ ಇಲಾಖೆಯೇ ಹದಗೆಟ್ಟಿದೆ ಎಂದರು.
ನಾಗರಿಕರಾದ ಅಶ್ರಫ್ ಮೊಹಮ್ಮದ್ ಪೊನ್ನೊಟ್ಟು, ಎಲ್.ಎನ್. ಅಡ್ಯಂತಾಯ, ಶಾಕಿರ್ ಅಳಕೆಮಜಲು, ಹರೀಶ್ ಕೊಟ್ಟಾರಿ, ಜಾಫರ್‌ಖಾನ್ ಉಪಸ್ಥಿತರಿದ್ದರು.