ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ಮಾತ್ರ ನಮ್ಮ ಜ್ಞಾನದ ಪರಿಧಿಯನ್ನು ತಿಳಿಯಲು ಸಾಧ್ಯ ಎಂದು ಆಳ್ವಾಸ್ ಕಾಲೇಜು ಮೂಡಬಿದಿರೆ ಇಲ್ಲಿನ ಸಹಾಯಕ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ಹೇಳಿದರು.
ಅವರು ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ನಡೆದ ರಿದಂ ಎಸ್.ವಿ.ಎಸ್ ಅಂತರ್ ಕಾಲೇಜು ಸ್ಪರ್ಧೆಗಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ 16 ಕಾಲೇಜುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ರಿದಂ ಎಸ್.ವಿ.ಎಸ್ ಇದರ ಸಮಗ್ರ ಪ್ರಶಸ್ತಿ, ಪಾರಿತೋಷಕವನ್ನು ಉಡುಪಿಯ ಪೂರ್ಣಪ್ರಜ್ಞ್ಞ ಸಂಧ್ಯಾ ಕಾಲೇಜಿನ ತಂಡ ಪಡೆದುಕೊಂಡಿತು. ಥೀಮ್ ಬೇಸ್ಡ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಮಂಗಳೂರು ಮಹೇಶ್ ಕಾಲೇಜಿನ ತಂಡವು ಪ್ರಥಮ ಬಹುಮಾನವನ್ನು, ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ತಂಡವು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು. ಮ್ಯಾಡ್ ಎಡ್ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ತಂಡವು ಪ್ರಥಮ ಬಹುಮಾನವನ್ನು, ರಾಮಕುಂಜದ ರಾಮಕುಂಜೇಶ್ವರ ಕಾಲೇಜಿನ ತಂಡವು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು. ಸ್ಪಾಟ್ ಪೋಟೋಗ್ರಾಫಿ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಮ್ ಕಾಲೇಜಿನ ವಿಘ್ನೇಶ್ ಪ್ರಥಮ ಬಹುಮಾನವನ್ನು, ಪುತ್ತೂರು ವಿವೇಕಾನಂದ ಕಾಲೇಜಿನ ಸಂಕೇತ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಕನ್ನಡ ಫೋಕ್ ಸಾಂಗ್ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಮ್ ಕಾಲೇಜಿನ ಸೌಜನ್ಯ ಪ್ರಥಮ ಸ್ಥಾನವನ್ನು, ಕಲ್ಲಡ್ಕ ಶ್ರೀರಾಮ ಕಾಲೇಜಿನ ಕಾವ್ಯಶ್ರೀ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಹಿಸ್ಟಾರಿಕಲ್ ಕ್ಯಾರೆಕ್ಟರ್ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ್ಞ ಸಂಧ್ಯಾ ಕಾಲೇಜಿನ ಚಿನ್ಮಯ್ ಪ್ರಥಮ ಸ್ಥಾನವನ್ನು,ಕುಂದಾಪುರದ ಭಂಡಾರ್‌ಕರ್‍ಸ್ ಕಾಲೇಜಿನ ಸಚಿನ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಗೀತಾ ರೆಸಿಟೇಷನ್ ಸ್ಪರ್ಧೆಯಲ್ಲಿ ಮೂಡಬಿದಿರೆ ಮಹಾವೀರ ಕಾಲೇಜಿನ ವಸುಧಾ ಎನ್ ರಾವ್ ಪ್ರಥಮ ಸ್ಥಾನವನ್ನು, ಉಜಿರೆ ಎಸ್.ಡಿ.ಎಮ್ ಕಾಲೇಜಿನ ಪ್ರಣೀತಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಡಿಬೆಟ್ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಮೃತ್ಯುಂಜಯ ಶಾಸ್ತ್ರಿ ಮತ್ತು ಸ್ವಸ್ತಿಕ್ ಪ್ರಥಮ ಸ್ಥಾನವನ್ನು, ಕಟೀಲು ಎಸ್.ಡಿ.ಪಿ.ಟಿ ಕಾಲೇಜಿನ ರಂಜನಾ ಮತ್ತು ಅನುಜ್ಞಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಜನರಲ್ ಕ್ವಿಜ್ ಸ್ಪರ್ಧೆಯಲ್ಲಿ ಕಟೀಲು ಎಸ್.ಡಿ.ಪಿ.ಟಿ ಕಾಲೇಜಿನ ವೈಷ್ಣವಿ ಶೆಟ್ಟಿ ಮತ್ತು ರಂಜನಾ ಪ್ರಥಮ ಸ್ಥಾನವನ್ನು, ರಾಮಕುಂಜದ ರಾಮಕುಂಜೇಶ್ವರ ಕಾಲೇಜಿನ ಸ್ವರಾಜ್ ರೈ ಮತು ಪವನ್ ರೈ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಸ್ವಾಗತಿಸಿದರು. ಸ್ಪರ್ಧೆಗಳ ಸಹ ಸಂಯೋಜಕ ಡಾ. ಟಿ.ಕೆ ರವೀಂದ್ರನ್ ವಂದಿಸಿದರು. ಉಪನ್ಯಾಸಕ ಶ್ರೀ ಕಿಟ್ಟು ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.