ಲೋಕಕಲ್ಯಾಣದ ಕೆಲಸವನ್ನು ನಿಸ್ವಾರ್ಥವಾಗಿ ಮಾಡಿದರೆ ಅದು ನಿಜವಾದ ಸಮಾಜಸೇವೆ , ಅ ಕೆಲಸವನ್ನು ಭವ್ಯ ರಾಣಿ ಮಾಡಿದ್ದಾರೆ. ಹಾಗಾಗಿ ಅವರು ಇತರರಿಗೆ ಮಾದರಿ ಎಂದು ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದರು.
www.bantwalnews.com report
ತುಮಕೂರು ಜಿಲ್ಲೆಯ ತುರುವೆಕೆರೆ ಎಂಬಲ್ಲಿ 300 ಕ್ಕೂ ಅಧಿಕ ಶೌಚಾಲಯವನ್ನು ನಿರ್ಮಿಸಿದ ರಾಜ್ಯ ಬಿಜೆಪಿ ಮಹಿಳಾ ಯುವಮೋರ್ಚಾದ ಕಾರ್‍ಯಕಾರಿಣಿ ಸದಸ್ಯೆ ಭವ್ಯ ರಾಣಿ ಅವರನ್ನು ಅವರ ಅನಂತಾಡಿ ಮನೆಯಲ್ಲಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಮಹಿಳಾ ಮೋರ್ಚಾದ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ಮಾಜಿ ಶಾಸಕರಾದ ರುಕ್ಮಯ ಪೂಜಾರಿ , ಪದ್ಮನಾಭ ಕೊಟ್ಟಾರಿ, ಬೆಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಬಿಜೆಪಿ ಪಕ್ಷದ ಪ್ರಮುಖರಾದ ಶ್ಯಾಮಲಾ ಕುಂದರ್, ಗೀತಾಂಜಲಿ ಸುವರ್ಣ, ಪೂಜಾ ಪೈ, ಸಂದ್ಯಾ ವೆಂಕಟೇಶ್, ಸುಗುಣಾ ಕಿಣಿ, ರಜನಿ ದುಗ್ಗಣ್ಣ, ಶೈಲಜಾ ಕೆ.ಟಿ ಭಟ್, ಗೀತಾ ಚಂದ್ರಶೇಖರ್, ಚೆನ್ನಪ್ಪ ಕೋಟ್ಯಾನ್, ಜಿತೇಂದ್ರ ಕೊಟ್ಟಾರಿ, ರಾಮ್‌ದಾಸ ಬಂಟ್ವಾಳ, ವಜ್ರನಾಥ ಕಲ್ಲಡ್ಕ, ನೇಮಿರಾಜ್ ರೈ, ದಿನೇಶ್ ಅಮ್ಟೂರು, ಜಿ ಆನಂದ, ಸನತ್ ರೈ, ಹರೀಶ್ ಮೂಡುಶೆಡ್ಡೆ, ಶಶಾಂಕ್ ಆಚಾರ್ಯ, ಚಂದಪ್ಪ ಮಾಸ್ಟರ್, ರಂಜಿತ್ ಮೈರ ಮತ್ತಿತತರು ಉಪಸ್ಥಿತರಿದ್ದರು. ರಾಜ್ಯ ಸಹ ವಕ್ತಾರೆ ಸುಲೋಚನಾ ಜಿಕೆ ಭಟ್ ಪ್ರಸ್ತಾವನೆಗೈದು ಸ್ವಾಗತಿಸಿದರು, ಅನಂತಾಡಿ ಗ್ರಾ.ಸಮಿತಿ ಕಾರ್‍ಯದರ್ಶಿ ದಿನೇಶ್ ವಂದಿಸಿದರು. ಮಣಿಮಾಲಾ ಕಾರ್‍ಯಕ್ರಮ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…