ಯಕ್ಷಗಾನ ಅವಿನಾಶಿ, ಅಮರ, ಚಿರಂತನ ಸ್ಫೂರ್ತಿಯ ಚಿಲುಮೆ ಎಂದು ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಗಂಗಾಧರ ಭಟ್ ಹೇಳಿದರು.
https://bantwalnews.comreport
ವಿಟ್ಲದಲ್ಲಿ ಯಕ್ಷಗಾನ ಬಯಲಾಟ ಅಕಾಡಮಿ ಬೆಂಗಳೂರು ಸಹಯೋಗದೊಂದಿಗೆ ವಿಟ್ಲದ ಯಕ್ಷಸಿಂಧೂರ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಲಾದ ‘ಯಕ್ಷ ಶಿಕ್ಷಣ’ ತರಬೇತಿ ಸಮಾರೋಪ ಸಮಾರಂಭ, ಯಕ್ಷ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಬಯಲಾಟ, ಪ್ರಸಿದ್ಧ ಅರ್ಥಧಾರಿ ಶಂಭು ಶರ್ಮ ಅವರಿಗೆ ‘ಯಕ್ಷ ಸಿಂಧೂರ’ ಪ್ರಶಸ್ತಿ ಪ್ರಧಾನ ಮತ್ತು ವಿಠಲ ಮಂದಿರದ ಅರ್ಚಕ ಕಲಾಭಿಮಾನಿ ರಾಮಮೂರ್ತಿ ಕೆದಿಲಾಯರಿಗೆ ‘ಕಲಾ ಪೋಷಕ ಪುರಸ್ಕಾರ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.
ಬೆಂಗಳೂರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಸದಸ್ಯ ತಾರಾನಾಥ ಬಲ್ಯಾಯ, ಕಲಾವಿದ ರಾಧಾಕೃಷ್ಣ ಕಲ್ಚಾರ್, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ವಿಟ್ಲ, ದಿನೇಶ್ ಮಾಮೇಶ್ವರ ಭಾಗವಹಿಸಿದ್ದರು.
ವಿಟ್ಲ ಮಂಗೇಶ್ ಭಟ್ ಅಭಿನಂದನಾ ಭಾಷಣ ಮಾಡಿದರು. ಯಕ್ಷ ಸಿಂಧೂರ ಪ್ರತಿಷ್ಠಾನದ ಸಂಚಾಲಕ ಸಿ ಹೆಚ್ ಸುಬ್ರಹ್ಮಣ್ಯ ಭಟ್ ಚನಿಲ ಕಾರ್ಯಕ್ರಮ ಸಂಯೋಜಿಸಿದರು. ಯಕ್ಷ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಂದ ಪೂರ್ವರಂಗ ಕುಣಿತ, ಬಾಲ ಕಲಾವಿದರಿಂದ ವೀರ ಬಬ್ರುವಾಹನ ಯಕ್ಷಗಾನ ಬಯಲಾಟ ಮತ್ತು ಪ್ರಸಿದ್ಧ ಕಲಾವಿದರಿಂದ ಗದಾಯುದ್ಧ-ರಕ್ತರಾತ್ರ ಬಯಲಾಟವು ನಡೆಯಿತು.