ಪ್ರಸಕ್ತ ದಿನಗಳಲ್ಲಿ ಕಚೇರಿ ಕಾರ್ಯಗಳ ಅಭಿವೃದ್ಧಿ ಮತ್ತು ಆಧುನಿಕ ತಂತ್ರಜ್ಞಾನವನ್ನು ಕಛೇರಿಗಳಲ್ಲಿ ಅಳವಡಿಸಿಕೊಳ್ಳುವ ಉದ್ದೇಶದಿಂದ ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ಯು.ಜಿ.ಸಿ ಪ್ರಾಯೋಜಿತ ಒಂದು ದಿನದ ವಿ.ವಿ. ಮಟ್ಟದ ಕಾರ್ಯಾಗಾರ ದಿನಾಂಕ 21 ರಂದು ನಡೆಯಲಿದೆ.
www.bantwalnews.com report
ಡೆವಲಪ್ಪಿಂಗ್ ಎಡ್ವಾನ್ಸ್‌ಡ್ ಸ್ಕಿಲ್ಸ್ ಪಾರ್ ಎಡ್‌ಮಿನಿಸ್ಟ್ರೇಟಿವ್ ಸ್ಟಾಫ್ ಎಂಬ ವಿಷಯದ ಕುರಿತು ನಡೆಯುವ ಈ ಕಾರ್ಯಾಗಾರವನ್ನು ಕಾಲೇಜಿನ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಜಂಟಿ ನಿದೇಶಕರಾದ ಅಕ್ಬರ್ ಹುಸೈನ್ ಫಾರೂಕ್ ಉದ್ಘಾಟಿಸಲಿದ್ದಾರೆ.
ಪ್ರಥಮ ದರ್ಜೆ ಕಾಲೇಜುಗಳ ಕಛೇರಿ ಸಿಬ್ಬಂದಿಗೆ ನಡೆಯುವ ಈ ಕಾರ್ಯಗಾರದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಸಹಾಯಕ ನಿರ್ದೇಶಕ. ಪಾವುಲ್ ಸ್ವಾಮಿ, ಲೆಕ್ಕಾಧಿಕಾರಿ ಗಣೇಶ್ ನಾಯಕ್, ಎಸ್.ವಿ.ಎಸ್ ಕಾಲೇಜಿನ ಗ್ರಂಥಪಾಲಕರಾದ ಡಾ. ಎಚ್.ಆರ್ ಸುಜಾತ, ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥರಾದ ಪ್ರೊ. ಸುಪರ್ಣಾ ರೈ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಪಾಂಡುರಂಗ ನಾಯಕ್ ಮತ್ತು ಕಾರ್ಯಾಗಾರದ ಸಂಯೋಜಕರಾದ . ಬಿ. ರಾಧೇಶ್ ಕುಮಾರ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.