ಅಂಬೇಡ್ಕರ್ ಕಂಡ ಕನಸು ನನಸಾಗಬೇಕಿದ್ದರೆ ಎಲ್ಲ ಸಮುದಾಯದ ಜನರಿಗೂ ಅಂಬೇಡ್ಕರ್ ಭವನ ಅರ್ಪಣೆಯಾಗಬೇಕು.
ಹೀಗಂದವರು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ.
www.bantwalnews.com report
ಬಿ.ಸಿ.ರೋಡಿನ ತಾಲೂಕು ಪಂಚಾಯಿತಿ ಕಚೇರಿ ಬಳಿ ಸುಮಾರು 2.5 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಂಟ್ವಾಳ ತಾಲೂಕು ಮಟ್ಟದ ಅಂಬೇಡ್ಕರ್ ಭವನ ಮತ್ತು ಹೋಬಳಿ ಮಟ್ಟದ ಅಂಬೇಡ್ಕರ್ ಭವನಗಳು ಹಾಗೂ ಗಡಿ ಪ್ರದೇಶದ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ದೇಶದ ಇತಿಹಾಸದಲ್ಲೇ 20 ಸಾವಿರ ಕೋಟಿ ರುಪಾಯಿ ಹಣವನ್ನು ಪ.ಜಾತಿ ಮತ್ತು ಪ.ಪಂಗಡದವರ ಅಭಿವೃದ್ದಿಗೆ ಮೀಸಲಿಟ್ಟು ಕ್ರಾಂತಿಕಾರಕ ಬದಲಾವಣೆ ತರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರ ಬೇಡಿಕೆಯಂತೆ ಹೆಚ್ಚುವರಿ ಒಂದು ಕೋಟಿ ಅನುದಾನ ನೀಡುವುದಾಗಿ ಘೋಷಿಸಿದರು.
ರೈ ರಾಮನಾದರೆ ಯು.ಟಿ.ಖಾದರ್ ಚಂದ್ರ, ಬಂಟ್ವಾಳ ತಾಲೂಕಿನ ಅಭಿವೃದ್ಧಿಯ ಹರಿಕಾರ ರಮಾನಾಥ ರೈ ಎಂದು ಗುಣಗಾನ ಮಾಡಿದ ಆಂಜನೇಯ, ಯು.ಟಿ.ಖಾದರ್ ಒಬ್ಬ ಬುದ್ದಿವಂತ ಸಚಿವ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು. ಆಹಾರ ಮತ್ತು ನಾಗರಿಕ ಖಾತೆ ಸಚಿವ ಯು.ಟಿ.ಖಾದರ್ ಮಾತನಾಡಿ ಹೋಬಳಿ ಹಾಗೂ ಗ್ರಾಮೀಣ ಮಟ್ಟದಲ್ಲಿರುವ ಅಂಬೇಡ್ಕರ್ ಭವನಗಳಿಗೆ ಹೆಚ್ಚುವರಿ ಅನುದಾನವನ್ನು ನೀಡಬೇಕು. ಈಗ ಕೊಡುತ್ತಿರುವ ಹಣ ಪಂಚಾಂಗಕ್ಕೂ ಸಾಕಾಗುವುದಿಲ್ಲ ಎಂದು ಸಚಿವರ ಗಮನ ಸೆಳೆದರು. ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ತಾ.ಪಂ.ಅಧ್ಯಕ್ಷ ಕೆ. ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ರವೀಂದ್ರ ಕಂಬಳಿ, ಜಯಶ್ರೀ ಕೋಡಂದೂರು, ಮಮತಾಗಟ್ಟಿ, ಮಂಜುಳಾ ಮಾವೆ, ಎಂ.ಎಸ್. ಮಹಮ್ಮದ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬೂಡಾ ಪೂರ್ವಾಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ. ಜಿ. ಸಂತೋಷ್ ಕುಮಾರ್, ಸಮಗ್ರ ಗಿರಿಜನ ಉಪಯೋಜನೆ ಸಮನ್ವಯಯಾಧಿಕಾರಿ ಡಾ. ಬಿ.ಎಸ್. ಹೇಮಲತಾ, ಪದ್ಮನಾಣ ನರಿಂಗಾನ, ಜನಾರ್ದನ ಚೆಂಡ್ತಿಮಾರ್ ಪುರಸಭಾ ಮುಖ್ಯಾಧಿಕಾರಿ ಸುಧಾಕರ, ಜಿ.ಪಂ.ಇಂಜಿನಿಯರಿಂಗ್ ವಿಭಾಗದ ನರೇಂದ್ರ ಬಾಬು, ಲಕ್ಕಪ್ಪ ಬೆಂಗಳೂರು ವೇದಿಕೆಯಲ್ಲಿದ್ದರು.
ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ವಂದಿಸಿದರು, ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.