ಬಂಟ್ವಾಳ

ಆಲಡ್ಕ ಖುತುಬಿಯ್ಯತ್ ವಾರ್ಷಿಕ ಸಮಾರೋಪ

bantwalnews.com report

ದೇವ ಸಾಮೀಪ್ಯ ದಕ್ಕಿಸಿಕೊಳ್ಳುವ ಅರಿವು ತಮ್ಮದಾಗಿಸಿಕೊಳ್ಳಬೇಕು ಎಂದು ಕೇರಳ-ಮಂಜೇರಿ ದಾರುಸ್ಸುನ್ನ ಅರಬಿಕ್ ಕಾಲೇಜು ಪ್ರಾಂಶುಪಾಲ ಎ. ನಜೀಬ್ ಮೌಲವಿ ಕರೆ ನೀಡಿದರು.

ಜಾಹೀರಾತು

ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಇಲ್ಲಿನ ಮರ್‌ಹೂಂ ತಾಜುಲ್ ಉಲಮಾ ಕೆ.ಕೆ. ಸ್ವದಖತುಲ್ಲಾ ಮೌಲವಿ ವೇದಿಕೆಯಲ್ಲಿ ನಡೆದ ಅಶೈಖ್ ಮುಹಿಯುದ್ದೀನ್ ಅಬ್ದುಲ್ ಖಾದರ್ ಜೀಲಾನಿ (ಖ.ಸಿ) ಅವರ ೮೭೭ನೇ ಅನುಸ್ಮರಣೆ, ೫೦ನೇ ಕುತುಬಿಯ್ಯತ್ ವಾರ್ಷಿಕ ಮಹಾಸಮ್ಮೇಳನ ಹಾಗೂ ನೂರಾನಿಯಾ ಅರಬಿಕ್ ದರ್ಸಿನ ೩೧ನೇ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಗೈದ ಅವರು ಮನುಷ್ಯ ಕರಗತ ಮಾಡಿಕೊಳ್ಳುವ ಜ್ಞಾನದ ಮೂಲಕ ದೇವ ಸಾಮೀಪ್ಯ ಲಭಿಸುವಂತಾಗಬೇಕು ವಿನಃ ಅದು ಕೇವಲ ಲೌಕಿಕ ಸ್ವಾರ್ಥ ಉದ್ದೇಶದಿಂದ ಕೂಡಿರಬಾರದು ಎಂದರು.

ದೇವ ಸಂಪ್ರೀತಿಗಾಗಿ ಪರಸ್ಪರ ಪ್ರೀತಿ-ಸ್ನೇಹ ಬಾಂಧವ್ಯ ಬಲಗೊಳಿಸುವುದರಿಂದ ಇಹ-ಪರ ವಿಜಯ ಸಾಧ್ಯವಿದೆ ಎಂದ ನಜೀಬ್ ಮೌಲವಿ ಲೌಕಿಕ ಸ್ವಾರ್ಥ ಸಾಧನೆಗಾಗಿ ಸ್ನೇಹ ಬಾಂಧವ್ಯ ಸೀಮಿತಗೊಳ್ಳದೆ ದೇವ ಸಂಪ್ರೀತಿಯ ನೈಜ ಉದ್ದೇಶದಿಂದ ಕೂಡಿರಬೇಕು ಎಂದರು.

ಕೇರಳ ಸಂಸ್ಥಾನ ಜಂ-ಇಯ್ಯತುಲ್ ಉಲಮಾ ಕಾರ್ಯದರ್ಶಿ ಹಾಜಿ ಸಯ್ಯಿದ್ ಅಬ್ದುಲ್ ಜಬ್ಬಾರ್ ಶಿಹಾಬ್ ತಂಙಳ್ ಪಾಣಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಸುನ್ನೀ ಜಮಾಅತ್ ಕೋಶಾಧಿಕಾರಿ ಕೆ.ಎ. ಸಮದ್ ಮೌಲವಿ ಮಣ್ಣಾರ್‌ಮಲ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೇರಳ ಸಂಸ್ಥಾನ ಜಂ-ಇಯ್ಯತುಲ್ ಉಲಮಾ ಇದರ ಮುಶಾವರ ಸದಸ್ಯ ಇ.ಎಂ. ಅಬೂಬಕ್ಕರ್ ಮುಸ್ಲಿಯಾರ್, ಮಂಜೇರಿ ದಾರುಸ್ಸುನ್ನ ಪ್ರೊಫೆಸರ್ ಅಬ್ದುಲ್ಲ ವಹಬಿ ಎಂ.ಡಿ. ಆರೂರ್ ಭಾಗವಹಿಸಿದ್ದರು.

ನಂದಾವರ ಕೇಂದ್ರ ಜುಮಾ ಮಸೀದಿ ಖತೀಬ್ ಹಾಜಿ ಎನ್.ಎಚ್. ಆದಂ ಫೈಝಿ, ಹಾಶಿರ್ ಮೌಲವಿ, ಮಸೀದಿ ಅಧ್ಯಕ್ಷ ಬಿ. ಅಬೂಬಕ್ಕರ್ ಬಾವ ಹಾಜಿ, ಕಾರ್ಯದರ್ಶಿ ಉಮ್ಮರ್ ಹಾಜಿ ದೆಂಜಿಪಾಡಿ, ಮದ್ರಸ ಮುಖ್ಯ ಶಿಕ್ಷಕ ಎಸ್.ಎಂ. ಅಬ್ದುಲ್ ಖಾದರ್ ಮದನಿ, ಮದ್ರಸ ಅಧ್ಯಾಪಕರಾದ ಅಬೂಬಕ್ಕರ್ ಮುಸ್ಲಿಯಾರ್, ಉಸ್ಮಾನ್ ಮದನಿ, ಜಿ.ಎಂ. ಹಸೀಬುರ್ರಹ್ಮಾನ್ ಮದನಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಸಯ್ಯಿದ್ ಅಬ್ದುಲ್ ಜಬ್ಬಾರ್ ಶಿಹಾಬ್ ತಂಙಳ್, ನಜೀಬ್ ಮೌಲವಿ, ಸಮದ್ ಮೌಲವಿ, ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಅವರನ್ನು ಮಸೀದಿಯ ೫೦ನೇ ಖುತುಬಿಯ್ಯತ್ ವಾರ್ಷಿಕೋತ್ಸವದ ಪ್ರಯುಕ್ತ ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಹೊರ ತರಲಾದ ’ಅನ್ನಜಾಅ’ ಸ್ಮರಣ ಸಂಚಿಕೆಯನ್ನು ಬಿಡುಗೊಳಿಸಲಾಯಿತು.

ಸ್ಥಳೀಯ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಸ್ವಾಗತಿಸಿ, ಮಸೀದಿ ಉಪಾಧ್ಯಕ್ಷ ಅಬೂಬಕ್ಕರ್ ರೆಂಗೇಲು ವಂದಿಸಿದರು. ಇಬ್ರಾಹಿಂ ಬಾತಿಷಾ ನಂದಾವರ ಕಾರ್ಯಕ್ರಮ ನಿರೂಪಿಸಿದರು.

ಈ ಪ್ರಯುಕ್ತ ನಡೆದ ೩ ದಿವಸಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಕ್ರಮವಾಗಿ ಸಜಿಪನಡು ಕೇಂದ್ರ ಜುಮಾ ಮಸೀದಿ ಖತೀಬ್ ಅಶ್ಫಾಕ್ ಫೈಝಿ, ಮಂಗಳೂರು-ಬಂದರು ಕೇಂದ್ರ ಜುಮಾ ಮಸೀದಿ ಖತೀಬ್ ವಿ.ಕೆ. ಸ್ವದಖತುಲ್ಲಾ ಫೈಝಿ ಹಾಗೂ ಮಂಜೇರಿ ದಾರುಸ್ಸುನ್ನ ಅರಬಿಕ್ ಕಾಲೇಜು ಪ್ರೊಫೆಸರ್ ಅಬ್ದುಲ್ಲ ವಹಬಿ ಆರೂರ್ ಉಪನ್ಯಾಸಗೈದರು. ಆಲಡ್ಕ ನೂರಾನಿಯ ಅರಬಿಕ್ ದರ್ಸ್ ವಿದ್ಯಾರ್ಥಿಗಳಿಂದ ಬುರ್‌ದಾ ಮಜ್ಲಿಸ್ ಹಾಗೂ ವಿವಿಧ ಪ್ರತಿಭಾ ಕಾರ್ಯಕ್ರಮ ನಡೆಯಿತು.

ಚಿತ್ರ : ಆಲಡ್ಕ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts