ವಿಟ್ಲ ಸಮೀಪದ ಉಕ್ಕುಡ ಸಮೀಪ ತೆರಳುವ ಮಾರ್ಗದಲ್ಲಿ ಸುಮಾರು 30 ಡಿಗ್ರಿ ತಿರುವೊಂದಿದೆ.
ಕಡಂಬು ಬದಿಯಾರು ನಿವಾಸಿಗಳಿದ್ದ ಆಲ್ಟೋ ಕಾರು ಅದೇ ಜಾಗದಲ್ಲಿ ವೇಗವಾಗಿ ಉಕ್ಕುಡದೆಡೆಗೆ ತೆರಳುತ್ತಿದ್ದ ಸಂದರ್ಭ, ಅಚಾನಕ್ ಆಗಿ ಚಾಲಕನ ನಿಯಂತ್ರಣ ತಪ್ಪಿತು. 50 ಮೀಟರ್ ದೂರದ ಬಲಬದಿಯಲ್ಲಿ ರಸ್ತೆ ಪಕ್ಕ ಮಣ್ಣಿನ ದಿಬ್ಬವೊಂದಿದೆ. ಹಾಗೂ ಅಲ್ಲೇ ಕಂಪೌಂಡ್ ಒಂದಿದೆ. ಕಾರು ಅಲ್ಲಿಗೆ ವೇಗವಾಗಿ ಬಂದು ಬಡಿಯಿತು. ಪರಿಣಾಮ, ಎರಡು ಜೀವಗಳು ಬಲಿಯಾದವು.
ಇದು ಉಕ್ಕುಡ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಸಮೀಪದ ವಸತಿ ನಿಲಯದ ಮುಂಭಾಗ ಸೋಮವಾರ ನಡೆದ ಅಪಘಾತ.
ಕಡಂಬು ಬದಿಯಾರು ನಿವಾಸಿಗಳಾದ ಸುಲೈಮಾನ್ (60), ಶಹಜಾನ್ (3 ತಿಂಗಳು) ಮೃತಪಟ್ಟರು. ಸೆಲ್ಮಾ (45), ಮಹಮ್ಮದ್ (23), ಝೊಹರಾ(29), ನಿಹಾ (7), ಸೈಫಾ (3ತಿಂಗಳು) ನಸೀರಾ(22), ಬಿಪಾತುಮ್ಮ(35) ಗಾಯಗೊಂಡರು. ವಿಟ್ಲ, ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವಿವಿಧ ಖಾಸಗೀ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…