ವಿಟ್ಲ ಸಮೀಪ ಉಕ್ಕುಡ ಚೆಕ್ ಪೋಸ್ಟ್ ಬಳಿ ಸೋಮವಾರ ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ.
bantwalnews.com report
ಕಡಂಬು ಸಮೀಪದ ಬದಿಯಾರು ನಿವಾಸಿ ಸುಲೇಮಾನ್ ಹಾಜಿ (60) ಮತ್ತು ಅವರ ಮೊಮ್ಮಗು ಶಹಜಾನ್ (ಮೂರು ತಿಂಗಳು) ಸಾವನ್ನಪ್ಪಿದವರು.
ಸುಲೇಮಾನ್ ಕುಟುಂಬ ವಿಟ್ಲ ಸಮೀಪದ ಕಡಂಬುವಿನಿಂದ ವಿಟ್ಲ ಮಾರ್ಗವಾಗಿ ಪುಣಚಕ್ಕೆ ಸಂಬಂಧಿಕರ ಹುಟ್ಟುಹಬ್ಬ ಪಾರ್ಟಿಗೆಂದು ಮಾರುತಿ ಆಲ್ಟೋ ಕಾರಿನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಕಾರು ಉಕ್ಕುಡ ಚೆಕ್ ಪೋಸ್ಟ್ ಸಮೀಪ ಬಂದಾಗ ಇದ್ದಕ್ಕಿದ್ದಂತೆ ಬಲಕ್ಕೆ ತಿರುಗಿ ನಿಯಂತ್ರಣ ಕಳೆದುಕೊಂಡಿತು. ಈ ಸಂದರ್ಭ ಅಲ್ಲಿದ್ದ ಬರೆಗೆ ಡಿಕ್ಕಿ ಹೊಡೆಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…