ಚೂರಿ ಇರಿತದಿಂದ ಯುವಕ ಗಾಯಗೊಂಡ ಘಟನೆ ಪಾಣೆಮಂಗಳೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ. ಪಾಣೆಮಂಗಳೂರು ಸಮೀಪ ನೆಹರೂನಗರ ನಿವಾಸಿ ಅಬ್ದುಲ್ ರಜಾಕ್ ಎಂಬವರ ಪುತ್ರ ಮಹಮ್ಮದ್ ನೌಫಲ್ (24) ಗಾಯಗೊಂಡಾತ. ಆರೋಪಿ ಹೋಟೆಲ್ ಮಾಲೀಕ ಮೇಲ್ಕಾರ್ ನಿವಾಸಿ ಯಾಸೀನ್ (31) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
www.bantwalnews.com report
ನೌಫಲ್ ಬಿ ಸಿ ರೋಡಿನಲ್ಲಿ ಭಾನುವಾರ ಶುಭಾರಂಭಗೊಳ್ಳಲಿರುವ ತನ್ನ ಸಹೋದರ ಅಂಗಡಿಗೆ ಕುರ್ಚಿ ತರಲು ಸ್ನೇಹಿತನ ಅಟೋ ರಿಕ್ಷಾದಲ್ಲಿ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ರೆಸ್ಟೋರೆಂಟ್ ಮುಂಭಾಗ ಹಾದು ಮೇಲ್ಕಾರ್ ಗೆ ತೆರಳುತ್ತಿದ್ದ ಸಂದರ್ಭ ಆಟೋರರಿಕ್ಷಾದಲ್ಲಿ ಸಂಗೀತ ನುಡಿಸಿದ ಕುರಿತು ಹೋಟೆಲ್ ಮಾಲೀಕ ಯಾಸೀನ್ ಆಕ್ಷೇಪಿಸಿದ್ದು ಜಗಳಕ್ಕೆ ಕಾರಣವಾಯಿತು. ನೌಫಲ್ ಮತ್ತು ಸ್ನೇಹಿತ ಮರಳಿ ಬರುತ್ತಿದ್ದ ವೇಳೆ ಹಲ್ಲೆ ನಡೆಸಿ, ಚೂರಿಯಿಂದ ಇರಿದಿದ್ದಾರೆ ಎಂದು ದೂರಲಾಗಿದೆ.
ಬಳಿಕ ಹೆಚ್ಚುವರಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ಆರೋಪಿ ಹೋಟೆಲ್ ಮಾಲಿಕ ಯಾಸೀನ್‌ನನ್ನು ವಶಕ್ಕೆ ಪಡೆದುಕೊಂಡಿದ್ದು, ಸ್ಥಳದಲ್ಲಿ ಜಮಾಯಿಸಿದ ಯುವಕರನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…