ಆರಾಧನೆ

ವಿಟ್ಲ ಜಾತ್ರೋತ್ಸವ ಆರಂಭ, ಧ್ವಜಾರೋಹಣ

ವಿಟ್ಲ ಶ್ರೀ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ಕಾಲಾವಧಿ ಜಾತ್ರೋತ್ಸವ ಶನಿವಾರ ಮಕರ ಸಂಕ್ರಮಣದ ಪರ್ವದಿನದಂದು ಆರಂಭಗೊಂಡಿತು. ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯುವುದರೊಂದಿಗೆ ಜಾತ್ರೋತ್ಸವ ವಿಧ್ಯುಕ್ತವಾಗಿ ಆರಂಭಗೊಂಡಿತು. ಸಂಜೆ ಲಕ್ಷದೀಪೋತ್ಸವ, ರಾತ್ರಿ ಉತ್ಸವ ಬಲಿ ನಡೆಯುತ್ತದೆ.

Photo by Sadashiva Bana, Shilpi Studio, Vittla

15, 16, 17ರಂದು ಸಂಜೆ 6.30ಕ್ಕೆ ನಿತ್ಯೋತ್ಸವಗಳು ನಡೆಯುವುದು.

18ರಂದು ಬುಧವಾರ ರಾತ್ರಿ 8.30ಕ್ಕೆ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಬರುತ್ತದೆ. ರಾತ್ರಿ 9ಕ್ಕೆ ಬಯ್ಯದ ಬಲಿ ಉತ್ಸವ ನಡೆಯಲಿದೆ. 19 ಗುರುವಾರ ಬೆಳಗ್ಗೆ 9.30ಕ್ಕೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ  ವಿತರಣೆ, ರಾತ್ರಿ 8ಕ್ಕೆ ತೆಪ್ಪೋತ್ಸವ ನಡೆಯಲಿದೆ. ಅಂದು ನಡುದೀಪೋತ್ಸವ ನಡೆಯುವುದು. 20ಕ್ಕೆ ರಾತ್ರಿ 9ಕ್ಕೆ ಹೂತೇರು ಉತ್ಸವ. 21ರಂದು ಶನಿವಾರ ಮಹಾರಥೋತ್ಸವ ನಡೆಯಲಿದೆ.

ಜಾಹೀರಾತು

ಅಂದು ಬೆಳಗ್ಗೆ 9.30ಕ್ಕೆ ದರ್ಶನ ಬಲಿ, ರಾಜಾಂಗಣದ ಬಟ್ಲು ಕಾಣಿಕೆ, ಪ್ರಸಾದ ವಿತರಣೆ. ರಾತ್ರಿ 7.30ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಬರುವುದು. ರಾತ್ರಿ 8ಕ್ಕೆ ಮಹಾರಥೋತ್ಸವ ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ.

22ರಂದು ಅವಭೃತ ಸ್ನಾನ, 24ರಂದು ಕೇಪುವಿನ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ. 25ರಂದು ಅರಮನೆಯಲ್ಲಿ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ ಬಳಿಕ ಕೇಪುವಿಗೆ ಭಂಡಾರ ಹೊರಡುವುದು ನಡೆಯಲಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts