ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇಕಡಾ 44.85 ರಷ್ಟು ಮತದಾನವಾಗಿತ್ತು. ಇದೀಗ ಮತ ಎಣಿಕೆ ಕಾರ್ಯ ಮೊಡಂಕಾಪು ಇನ್ಫೆಂಟ್ ಜೀಸಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿದೆ. ಮಧ್ಯಾಹ್ನದ ವೇಳೆ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಬಂಟ್ವಾಳ ಎಪಿಎಂಸಿಗೆ ಒಟ್ಟು 50167 ಮತದಾರರನ್ನು ಹೊಂದಿದ್ದು ಈ ಪೈಕಿ 22497 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಎಪಿಎಂಸಿಗೆ 12 ಕ್ಷೇತ್ರಗಳನ್ನು ಹೊಂದಿದ್ದು11 ಕೃಷಿಕರ ಕ್ಷೇತ್ರದಲ್ಲಿ 45.02 ಶೇಕಡ ಹಾಗೂ ವರ್ತಕರ ಕ್ಷೇತ್ರಕ್ಕೆ 76.84 ಶೇಕಡಾ ಮತದಾನವಾಗಿತ್ತು.