bantwalnews.com report
ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಾಹ್ಮಣ ಪರಿಷತ್ತು ವತಿಯಿಂದ ಗಾಯತ್ರೀ ಪುರಶ್ಚರಣ ಹವನ ಲೋಕಕಲ್ಯಾಣಾರ್ಥವಾಗಿ ಜನವರಿ 15ರಂದು ನಡೆಯಲಿದೆ. ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ಸಭೆ ರಮೇಶ ಉಪಾಧ್ಯಾಯ ಅಧ್ಯಕ್ಷತೆಯಲ್ಲಿ ನಡೆಯುವುದು. ಕೇಶವ ಭಟ್ಟ ಕೇಕಣಾಜೆ ಧಾರ್ಮಿಕ ಉಪನ್ಯಾಸ ನೀಡುವರು.
ಮಧ್ಯಾಹ್ನ 2.30ರಿಂದ 5.30ವರೆಗೆ ಉತ್ತರನ ಪೌರುಷ ಯಕ್ಷಗಾನ ನಡೆಯಲಿದೆ. ಉಂಡೆಮನೆ ಕೃಷ್ಣ ಭಟ್ ಭಾಗವತಿಕೆ, ಕಿನಿಲಕೋಡಿ ಗಿರೀಶ್ ಭಟ್, ರಾಮಪ್ರಸಾದ ವಧ್ವ ಚೆಂಡೆ ಮದ್ದಳೆಯಲ್ಲಿ ಸಹಕರಿಸುವರು. ಶಂಭು ಶರ್ಮ ಉತ್ತರಕುಮಾರನಾಗಿ, ರವಿಶಂಕರ ವಳಕುಂಜ ಗೋಪಾಲಕನಾಗಿ, ಹರೀಶ ಬಳಂತಿಮೊಗರು ಬೃಹನ್ನಳೆಯಾಗಿ ಬಡಕ್ಕಿಲ ಗಣರಾಜ ಭಟ್ ಉತ್ತರೆಯಾಗಿ ಪಾತ್ರ ನಿರ್ವಹಿಸುವರು ಎಂದು ಗಾಯತ್ರಿ ಪುರಶ್ಚರಣ ಹವನ ಸಮಿತಿ ಪ್ರಕಟಣೆ ತಿಳಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…