ಸ್ವಾಮಿ ವಿವೇಕಾನಂದರು ನಮ್ಮೆಲರ ಆಧ್ಯಾತ್ಮಿಕ ಗುರು, ಆದರ್ಶ ಪುರುಷ ಎಂದು ಹೇಳುವ ಪ್ರತಿಯೊಬ್ಬರೂ ಬಡವರ ಏಳ್ಗೆ, ಸ್ವಚ್ಛತೆ, ಹಾಗೂ ಆರೋಗ್ಯಪೂರ್ಣ ಭಾರತದ ಕುರಿತು ಯೋಚಿಸಬೇಕು, ಕಾರ್ಯೋನ್ಮುಖರಾಗಬೇಕು ಎಂದು ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗು ವಿವೇಕಾನಂದ ಬಳಗದ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವೇಕಾನಂದ ಜಯಂತಿ ಹಾಗು ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಬಳಗದ ಅಧ್ಯಕ್ಷ ಶ್ರೀ ರಮಾನಂದ ಭಟ್ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ ಕಿಟ್ಟು ಕೆ. ರಾಮಕುಂಜ ವಂದಿಸಿದರು. ಮನೀಷ್ ಹಾಗು ಮೇಧಾ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…