ಬಳಿಕ 10 ಗಂಟೆಗೆ ವಿವೇಕಾನಂದ ಕ್ಯಾಂಪಸ್ ನ ಕೇಶವ ಸಂಕಲ್ಪದಲ್ಲಿ ವಿವೇಕ ಉದ್ಯೋಗ ಮೇಳ 2017 ಮೆಗಾ ರಿಕ್ರೂಟ್ ಮೆಂಟ್ ಈವೆಂಟ್ ನಡೆಯಲಿದೆ. ಕಟ್ಟಡ, ಉದ್ಯೋಗ ಮೇಳವನ್ನು ಕೇಂದ್ರ ವಾಣಿಜ್ಯೋದ್ಯಮ ಮತ್ತು ಕೌಶಲಾಭಿವೃದ್ಧಿ ಸಚಿವ ರಾಜೀವ ಪ್ರತಾಪ್ ರೂಡಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಡಾ. ಕಲ್ಲಡ್ಕ ಪ್ರಭಾಕರ ಭಟ್ ವಹಿಸುವರು. ತರಬೇತಿ ಕೇಂದ್ರವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು ಎಂದು ಅವರು ಹೇಳಿದರು. ಇದೇ ವೇಳೇ ವಿವೇಕಾನಂದ ಕ್ಯಾಂಪಸ್ ನಲ್ಲಿ ಪೂರ್ವಾಹ್ನ 11.30ಕ್ಕೆ ಲಘು ಉದ್ಯೋಗ ಭಾರತಿ ಸಹಯೋಗದಲ್ಲಿ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ ನಡೆಯಲಿದೆ.
ಉದ್ಯೋಗ ಮೇಳಕ್ಕೆ ಉಚಿತ ಬಸ್
ಶಿಬಾಜೆ, ಉಜಿರೆ, ಪುಂಜಾಲಕಟ್ಟೆಎ, ಗುಂಡ್ಯ, ಕೊಂಬಾರು, ಕಡಬ, ಕಲ್ಲುಗುಡ್ಡೆ, ಇಳಂತಿಲ, ಸುಬ್ರಹ್ಮಣ್ಯ, ಎಡಮಂಗಲ, ಪೆರ್ಲಂಪಾಡಿ, ಪಾಣಾಜೆ, ಬಿಳಿಯೂರು, ಕುದ್ದುಪದವು, ಸಾಲೆತ್ತೂರು, ಮಂಚಿ, ಪೊಳಲಿ, ಬದುಯಡ್ಕ, ಈಶ್ವರಮಂಗಲ, ಕಲ್ಲಡ್ಕ, ದರ್ಬೆ, ಸುಳ್ಯ, ಎಲಿಮಲೆ, ಬೆಳ್ಳಾರೆ, ಮಂಗಳೂರು, ಕಲ್ಮಡ್ಕ, ಆಲಂಕಾರು, ಒಡಿಯೂರು ಹೀಗೆ ಒಟ್ಟು 28 ಕೇಂದ್ರಗಳಿಂದ ಬೆಳಗ್ಗೆ 7.30ಕ್ಕೆ ಬಸ್ ವ್ಯವಸ್ಥೆ ಇದ್ದು, ಸಂಜೆ 5ಕ್ಕೆ ಅದೇ ಜಾಗಗಳಿಗೆ ಕಾಲೇಜಿನಿಂದ ಹೊರಡುವುದು .
ಪ್ರಾಥಮಿಕ, ಪ್ರೌಢ ಶಿಕ್ಷಣದಿಂದ ತೊಡಗಿ, ಸ್ನಾತಕೋತ್ತರ, ವೃತ್ತಿಪರ ಶಿಕ್ಷಣ ಹೊಂದಿದರವು ಮೇಳದಲ್ಲಿ ಭಾಗವಹಿಸಲು ಅವಕಾಶವಿದೆ. ಸ್ವೋದ್ಯೋಗಕ್ಕೂ ಇಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಇದೆ .
for more info about udyoga mela http://www.vivekaudyoga.com
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…