bantwalnews.com report
ಪುತ್ತಿಗೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಬಯಲು ರಂಗಮಂದಿರದಲ್ಲಿ ಆಳ್ವಾಸ್ ವಿರಾಸತ್ 2017 ಆರಂಭಗೊಂಡಿದೆ.
23ನೇ ವರ್ಷದ ಆಳ್ವಾಸ್ ವಿರಾಸತ್‌ನ ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಸಾಂಪ್ರದಾಯಿಕ ವರ್ಣರಂಜಿತ ಮೆರವಣಿಗೆಗೆ ಚಾಲನೆ ದೊರಕಿತು.
ಶಂಖದ ನಾದ, ಕೊಂಬಿನ ಮೈನವಿರೇಳಿಸುವ ಧ್ವನಿ, ಇವುಗಳ ಮಧ್ಯೆ ಮಂಗಳೂರಿನ ಚೆಂಡೆ ವಾದನದ ಸೊಗಸು ನೆರೆದವರ ಮನಸೂರೆಗೊಳಿಸಿತು. ಶ್ರೀಲಂಕಾದ ನೃತ್ಯ ಕಲಾವಿದರು, ಕಲಶ, ಸಾಕ್ಸೊಪೋನ್ ಹಾಗೂ ಕದಾನಿ, ವಿವಿಧ ರಾಜ್ಯಗಳ ವೈವಿದ್ಯಮಯ ಕಲಾಪ್ರಕಾರಗಳನ್ನು ಮೆರವಣಿಗೆಯಲ್ಲಿ ಪರಿಚಯಿಸಲಾಯಿತು. ಸುಮಾರು 9 ಕಲಾಪ್ರಕಾರಗಳು ಮೆರವಣೀಗೆಯಲ್ಲಿ ಪ್ರದರ್ಶನ ನೀಡಿ ಸಭಿಕರ ಗಮನಸೆಳೆದರು.
ಆಳ್ವಾಸ್ ವಿರಾಸತ್‌ಗಾಗಿ ಸಿದ್ಧಗೊಂಡಿರುವ ಪ್ರಶಾಂತ ವಾತಾವರಣದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಗುತ್ತಿನ ಮನೆಯ ಪ್ರವೇಶಧ್ವಾರ ಆವರಣದಿಂದ ಆರಂಭಗೊಂಡ ಕಲಾ ಮೆರವಣಿಗೆ ಸುಮಾರು 15 ನಿಮಿಷ ಹೊಸ ಸಾಂಸ್ಕೃತಿಕ ಲೋಕವನ್ನು ಸೃಷ್ಟಿ ಮಾಡಿತು.