ಬರಿಮಾರು ಗ್ರಾಮದ ಶ್ರೀ ಮಹಮಾಹಿ ದೇವಸ್ಥಾನದ ಬಳಿ ವ್ಯಕ್ತಿಯೊಬ್ಬರು ಸರಕಾರಿ ಜಮೀನನ್ನು ಅತಿಕ್ರಮಣ ಮಾಡಿಕೊಂಡು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದನ್ನು ಹತ್ತು ದಿನದ ಒಳಗಾಗಿ ತೆರವುಗೊಳಿಸುವಂತೆ ಮಂಗಳೂರು ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಸೂಚಿಸಿದ್ದಾರೆ.
bantwalnews.com report
ಸ್ಥಳೀಯ ನಿವಾಸಿ ನೀಡಿದ ದೂರಿನನ್ವಯ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಂಗಳೂರು ಸಹಾಯಕ ಆಯುಕ್ತ ಈ ಸೂಚನೆ ನೀಡಿದ್ದು ಬಳಿಕ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಗೆ ಆದೇಶಿಸಿದ್ದಾರೆ.
ಗಣಿ ಇಲಾಖೆಯ ಗಿರೀಶ್ ಮೋಹನ್, ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕೆ., ಗ್ರಾಮ ಕರಣಿಕರಾದ ಬಸಪ್ಪ, ತಾಲೂಕು ಕಚೇರಿಯ ಸಿಬ್ಬಂದಿ ಸದಾಶಿವ ಕೈಕಂಬ ಉಪಸ್ಥಿತರಿದ್ದರು.