bantwalnews.com report
ಸ್ವಾಮಿ ವಿವೇಕಾನಂದರು ಮಾನವತೆಯ ಸಂದೇಶದ ತಳಹದಿಯಲ್ಲಿ ಅಖಂಡ ಭಾರತ ನಿರ್ಮಾಣಕ್ಕೆ ಹೊರಟವರು. ಅವರ ಸೈದ್ಧಾಂತಿಕ ನಿಲುವುಗಳನ್ನು ಸಮಾಜಕ್ಕೆ ನೈಜವಾಗಿ ತಲುಪಿಸುವ ಕೆಲಸ ಇಂದು ಅಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾಹವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೆಟ್ಟವರನ್ನು ಮನುಷ್ಯರನ್ನಾಗಿಸಿ ಮಾಡುವುದು, ಮನುಷ್ಯರನ್ನು ದೇವರನ್ನಾಗಿಸುವುದು ಧರ್ಮದ ಕೆಲಸ ಎಂಬುದನ್ನು ಸಾರಿದ ಸಾಮಾಜಿಕ ಸಾಮರಸ್ಯದ ಪ್ರರತಿಪಾದಕ ಸ್ವಾಮಿ ವಿವೇಕಾನಂದರು ಎಂದ ಸಚಿವರು, ರಾಜಕೀಯ ಲಾಭಕ್ಕಾಗಿ ಸುಳ್ಳು ನುಡಿಯುವುದನ್ನು ಕೊನೆಗಾಣಿಸಬೇಕು ಎಂದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮೋಹನ್ ರಾವ್, ಎಸ್‌ವಿಎಸ್ ಕಾಲೇಜಿನ ಪ್ರಾಂಶುಪಾಲ ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ಬಂಟ್ವಾಳ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ, ರಾಷ್ಟ್ರೀಯ ಯುವ ಸಪ್ತಾಹ ಆಚರಣೆ ಸಮಿತಿ ನೋಡಲ್ ಅಧಿಕಾರಿ,ಡಾ.ಅಜಕ್ಕಳ ಗಿರೀಶ ಭಟ್ ಪ್ರಸ್ತಾವಿಸಿದರು. ನಂದ ಕಿಶೋರ್ ವಂದಿಸಿದರು. ಕಲಾವಿದ ಮಂಜು ವಿಟ್ಲ ಕಾರ್ಯಕ್ರಮ ನುರೂಪಿಸಿದರು.