ವಿಟ್ಲ ಸೀಮೆಯ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ರಾಜಗೋಪುರ, ಆನೆಬಾಗಿಲು, ತೀರ್ಥಮಂಟಪ, ಒಳಾಂಗಣ ಹಾಸುಕಲ್ಲು ಮೊದಲಾದ ಕಾಮಗಾರಿಗಳ ಲೋಕಾರ್ಪಣೆ ಅಂಗವಾಗಿ ಬುಧವಾರ ರಾತ್ರಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶ, ವಾಸ್ತು ಬಲಿ, ರಕ್ಷಾ ಕಲಶ ಆಲಂಪಾಡಿ ಬ್ರಹ್ಮಶ್ರೀ ವೇದಮೂರ್ತಿ ಪದ್ಮನಾಭ ತಂತ್ರಿ ಹಾಗೂ ಕುಂಟುಕುಡೇಲು ಬ್ರಹ್ಮಶ್ರೀ ವೇದಮೂರ್ತಿ ರಘುರಾಮ ತಂತ್ರಿ ಅವರ ನೇತೃತ್ವದಲ್ಲಿ ನೆರವೇರಿತು.
ಗುರುವಾರ 108 ತೆಂಗಿನಕಾಯಿ ಗಣಪತಿ ಹೋಮ, ಪೂರ್ಣಾಹುತಿ, ಬಿಂಬ ಶುದ್ಧಿ, ಬಲಿಕಲ್ಲು ಪ್ರತಿಷ್ಠೆ,ಶ್ರೀ ಪಂಚಲಿಂಗ ಪುಷ್ಕರಣಿಯಲ್ಲಿ ಶಿವಲಿಂಗ ಪ್ರತಿಷ್ಠೆ, ಕಲಶಾಭಿಷೇಕ ಪೂಜೆ, ಶ್ರೀ ಪಂಚಲಿಂಗೇಶ್ವರನಿಗೆ ಹಾಗೂ ಪರಿವಾರ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಮಹಾಸಂತರ್ಪಣೆ ಮತ್ತು ಶ್ರೀ ಪಂಚಲಿಂಗ ಪುಷ್ಕರಣಿಯಲ್ಲಿ ಶಿವಲಿಂಗ ಪ್ರತಿಷ್ಠೆ ನಡೆಯಿತು.
ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್.ಎನ್.ಕೂಡೂರು, ಆನುವಂಶಿಕ ಮೊಕ್ತೇಸರ ವಿ.ಜನಾರ್ದನ ವರ್ಮ ಅರಸರು, ಮುಖ್ಯಸ್ಥರಾದ ಎಚ್.ಜಗನ್ನಾಥ ಸಾಲ್ಯಾನ್, ಬಿ.ಶಾಂತಾರಾಮ ಶೆಟ್ಟಿ, ಪಿ.ರಾಧಾಕೃಷ್ಣ ಪೈ, ಸುಬ್ರಾಯ ಪೈ, ನಂದ ವರ್ಮ ಅರಸರು, ನರಸಿಂಹ ವರ್ಮ, ಕೃಷ್ಣಯ್ಯ ಕೆ.ವಿಟ್ಲ, ದಯಾನಂದ ಆಳ್ವ ಕಡಂಬು, ಸದಾಶಿವ ಆಚಾರ್ಯ ಕೈಂತಿಲ, ವಿ.ರಾಮದಾಸ ಶೆಣೈ, ಎಂ.ನಿತ್ಯಾನಂದ ನಾಯಕ್, ಎಂ.ರಾಧಾಕೃಷ್ಣ ನಾಯಕ್, ಎಂ.ಹರೀಶ್ ನಾಯಕ್, ಸುಭಾಶ್ಚಂದ್ರ ನಾಯಕ್, ಪ್ರಭಾಕರ ಶೆಟ್ಟಿ ದಂಬೆಕಾನ, ಶಶಿಕಾಂತ ಪ್ರಭು, ಕೆ.ಕೆ.ಸಂಜೀವ, ಅನಂತಪ್ರಸಾದ್, ರಾಘವೇಂದ್ರ ಪೈ, ಚಂದ್ರಶೇಖರ ರೈ, ಸೀಮೆಯ ಗುರಿಕ್ಕಾರರು, ಹಲವು ಸಂಘ ಸಂಸ್ಥೆಯ ಮುಖ್ಯಸ್ಥರು, ಮಂಜಲಾಡಿ ಕುಟುಂಬಸ್ಥರು ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.