bantwalnews.com report
ಕುಟುಂಬಸ್ಥರ ಭವಿಷ್ಯದ ಬಗ್ಗೆ ಯಜಮಾನನಲ್ಲಿರುವ ಭಯವನ್ನು ಇನ್ಸುರೆನ್ಸ್ ಸೌಲಭ್ಯ ದೂರಮಾಡುದರ ಮೂಲಕ ಜೀವನದಲ್ಲಿ ಆತ್ಮ ವಿಶ್ವಾಸವನ್ನುಂಟು ಹೆಚ್ಚಿಸುತ್ತದೆ ಎಂದು ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಹೇಳಿದರು.
ಬಿ.ಸಿ.ರೋಡಿನ ಭಾರತ್ ಕಾಂಪ್ಲೆಕ್ಸ್‌ನಲ್ಲಿ ಆರಂಭವಾದ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್‌ನ ನೂತನ ಶಾಖೆಯನ್ನು ಗುರುವಾರ ಬೆಳಗ್ಗೆ ಉದ್ಘಾಟಿಸಿ ಬಳಿಕ ನಡೆದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಶೈಲಜಾ ರಾಜೇಶ್, ಯುನೈಟೆಡ್ ಇಂಡಿಯಾ ಇನ್ಸುರೆನ್ಸ್‌ನ ಸುರತ್ಕಲ್ ಯುನಿಟ್ ಮ್ಯಾನೇಜರ್ ರತ್ನಾವತಿ ರಂಜನ್, ಸಂಸ್ಥೆಯ ಮಾಲಕ ಶಶಿ ಕುಡ್ಲ, ಸಿಬ್ಬಂದಿಗಳಾದ ಪ್ರಶಾಂತ್, ಕಾರ್ತಿಕ್, ಮಮತ, ಅಶ್ವಿತ, ಅಕ್ಷತ, ಶ್ರುತಿ, ವೀಣಾ, ಜಯಲಕ್ಷ್ಮಿ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…