ಫರಂಗಿಪೇಟೆಯ ವಿಶ್ವಾಸ್ ಸಿಟಿ ಸೆಂಟರ್ ನಲ್ಲಿರುವ ನಮ್ಮ ಆಯುರ್ವೇದ ಚಿಕಿತ್ಸಾಲಯ ಮತ್ತು ಔಷಧಾಲಯದಲ್ಲಿ ಜನವರಿ ೧೫ರಂದು ಮಧುಮೇಹ ತಪಾಸಣಾ ಉಚಿತ ಶಿಬಿರ ನಡೆಯಲಿದೆ.
ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ರವರೆಗೆ ನಡೆಯುವ ಶಿಬಿರವನ್ನು ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣಕುಮಾರ ಪೂಂಜ ಉದ್ಘಾಟಿಸುವರು. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಉಪಸ್ಥಿತರಿರುವರು. ಈ ಸಂದರ್ಭ ತಜ್ಞ ವೈದ್ಯರಾದ ಡಾ. ಮಹೇಶ್ ಟಿ.ಎಸ್, ಡಾ.ಶ್ರೀವಿದ್ಯಾ ಎಂ, ಹಾಜರಿರುವರು ಎಂದು ನಮ್ಮ ಆಯುರ್ವೇದ ಬಳಗದ ಪ್ರಕಟಣೆ ತಿಳಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…