ತೆರಿಗೆ ತಪ್ಪಿಸಲು ಯಾರನ್ನೂ ಬಿಡೆವು. ಇಂದು ಯುವ ಸಮೂಹ ಡಿಜಿಟಲ್ ಪಾವತಿಯತ್ತ ಮನ ಮಾಡಬೇಕು ಎಂದು ಕೇಂದ್ರ ವಾಣಿಜ್ಯ, ಕೈಗಾರಿಕೆ, ಮತ್ತು ಹಣಕಾಸು ಖಾತೆಯ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಗುರುವಾರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದೆಡೆ ಪ್ರಪಂಚದಾದ್ಯಂತ ನಮ್ಮ ದೇಶವನ್ನು ಅದ್ಭುತ ಮಾರುಕಟ್ಟೆಯ ತಾಣವೆಂದು ಬಿಂಬಿಸುತ್ತಾ ಬರುವ ಸಂದರ್ಭದಲ್ಲಿ ಇದು ತೆರಿಗೆ ಕಳ್ಳರ ಸ್ವರ್ಗವಾಗುವುದನ್ನು ಸಹಿಸಲು ಸಾಧ್ಯವೇ?, ಯಾರೋ ಕೆಲವು ಮಂದಿ ಪ್ರಾಮಾಣಿಕರಾಗಿ ಉಳಿದ ಹಲವರು ತಮ್ಮ ಮನೆಯ ಹಾಸಿಗೆಯಡಿ ಹಣ ಬಚ್ಚಿಟ್ಟುಕೊಳ್ಳುವುದನ್ನು ಒಪ್ಪಿಕೊಳ್ಳಬೇಕೇ? ನಮ್ಮ ಸರ್ಕಾರದ ಕಠಿಣ ನಿರ್ಧಾರಗಳು ತೆರಿಗೆಗಳ್ಳರ ಅಂತರಂಗದಲ್ಲಿ ನಡುಕ ಹುಟ್ಟಿಸುತ್ತದೆ. ಯುವಸಮೂಹ ಡಿಜಿಟಲ್ ಪಾವತಿಯೆಡೆಗೆ ಮನಮಾಡಬೇಕು ಮಾತ್ರವಲ್ಲದೆ ಹೆತ್ತವರನ್ನೂ ಆ ಕಡೆಗೆ ಒಯ್ಯಬೇಕು ಎಂದು ಸಲಹೆ ನೀಡಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…