bantwalnews.com
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ನಡೆಯಿತು.
ಅಧ್ಯಾಪಕ ಸುಮಂತ್ ವಿವೇಕಾನಂದರು ನಡೆದ ಬಂದ ದಾರಿ ಮತ್ತು ಅವರ ಜೀವನದ ಘಟನೆಗಳನ್ನು ತಿಳಿಸಿದರು. ನಾಲ್ಕನೇ ತರಗತಿ ವಿದ್ಯಾರ್ಥಿಗಳ ಅನನ್ಯ ಮತ್ತು ಶ್ರಮಿಕ ವಿವೇಕಾನಂದರ ಬಗ್ಗೆ ತಮಗೆ ತಿಳಿದ ವಿಷಯಗಳನ್ನು ಹಂಚಿಕೊಂಡರು.
ವಿವೇಕಾನಂದ ಜಯಂತಿ ಪ್ರಯುಕ್ತ ನಡೆದ ಭಾಷಣ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಗಿರಿ ಸತೀಶ್ ಭಟ್, ಮಾತೃಭಾರತಿ ಅಧ್ಯಕ್ಷೆ ಅರುಣೋದಯ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಗಿಲ್ಕಿಂಜ ಕೃಷ್ಣ ಭಟ್, ಚಂದ್ರಶೇಖರ ಸಾಲಿಯಾನ್, ರಾಕೋಡಿ ಈಶ್ವರ ಭಟ್ ಹಾಗೂ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಅನ್ನಪೂರ್ಣ ನಿರೂಪಿಸಿ, ಚಂದ್ರಹಾಸ ಸ್ವಾಗತಿಸಿದರು.
ಸ್ವಚ್ಛತಾ ಕಾರ್ಯಕ್ರಮ
ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶ್ರೀರಾಮ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿರುವ ವಿವೇಕಾನಂದರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್‍ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾಕೇಂದ್ರದಲ್ಲಿ ಸ್ವಚ್ಚತಾಕಾರ್‍ಯ ನಡೆಸಿ ನಂತರ ಸುಧೆಕಾರ್‌ನಲ್ಲಿರುವ ಕೃಷಿ ಕೇಂದ್ರದಲ್ಲಿ ಶ್ರಮದಾನ ಮಾಡಲಾಯಿತು.
ವಿದ್ಯಾಕೇಂದ್ರದಸಂಚಾಲಕ ವಸಂತ ಮಾಧವ, ಕೋಶಾಧಿಕಾರಿ ಸತೀಶ್ ಭಟ್ ಶಿವಗಿರಿ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್‍ಯದರ್ಶಿ ಚಿತ್ತರಂಜನ್ ಹೊಸಕಟ್ಟ, ಹಾಗೂ ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ, ಮಾತೃಭಾರತಿ, ಶ್ರೀರಾಮ ಪ್ರೌಢಶಾಲಾಭಿವೃದ್ಧಿ ಸಮಿತಿ, ಶ್ರೀರಾಮ ಕಾಲೇಜುಅಭಿವೃದ್ಧಿ ಸಮಿತಿ ಮತ್ತು ಶ್ರೀರಾಮ ಸೌಹಾರ್ದ ಸಹಕಾರಿ ನಿ. ಸದಸ್ಯರು, ಪ್ರಾಥಮಿಕ ಶಾಲೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಮತ್ತು ಶ್ರೀರಾಮ ಪದವಿ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು, ಶಾಲಾ ವಾಹನ ಚಾಲಕರು ಭಾಗವಹಿದ್ದರು.