ಕನ್ಯಾನ ಭಾರತ ಸೇವಾಶ್ರಮದಲ್ಲಿ 53ನೇ ವಾರ್ಷಿಕೋತ್ಸವ, ಸ್ಥಾಪಕ ಧೀರೇಂದ್ರನಾಥ್ ಭಟ್ಟಾಚಾರ್ಯ ಅವರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆಯನ್ನು ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ಎಂ ವೆಂಕಟೇಶ ಪೈ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ ಜೆಮ್‌ಶೆಡ್ ಪುರ್ ಟಾಟಾ ರಿಫ್ರೆಕ್ಟರೀಸ್ ನಿವೃತ್ತ ಆಡಳಿತ ನಿರ್ದೇಶಕ ಸಿ ದೇವದಾಸ್ ಕಾಮತ್ ಮಾತನಾಡಿ ಸಮಾಜಕ್ಕಾಗಿ ಅರ್ಪಣೆ ಮಾಡಿ ಕೆಲಸ ನಡೆಸುವವರಿಗೆ ನಾವು ಜತೆಯಾಗಿ ನಿಂತಾಗ ನಮ್ಮ ಪ್ರಗತಿಯೂ ಸಾಧ್ಯ ಎಂದು ತಿಳಿಸಿದರು.
ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಚಂದಪ್ಪ ಮೂಲ್ಯ, ನಿವೃತ್ತ ಸೇವಾಧಿಕಾರಿ ಎ. ಎನ್ ಮಾಣಿಪ್ಪಾಡಿ, ನಿವೃತ್ತ ಭೂ ಸೇನಾನಿ ಡಿ. ರಾಮ ಮೂಲ್ಯ ದೇಲಂತಬೆಟ್ಟು, ನಿವೃತ್ತ ಯೋಧರಾದ ಡಿ. ಶಿವರಾಮ ರಾವ್ ದೇಲಂತಬೆಟ್ಟು, ಸಿ ಎಚ್ ರಾಮಚಂದ್ರ ಭಟ್, ಡಿ. ವೆಂಕಪ್ಪ ಮೂಲ್ಯ ಕನ್ಯಾನ, ದುಗ್ಗಪ್ಪ ಮೂಲ್ಯ ಅಂಗ್ರಿ, ಎಂಟೆಕ್‌ನಲ್ಲಿ ಚಿನ್ನದ ಪದಕ ವಿಜೇತ ಶ್ರೀಷ ರಾವ್ ಡಿ ಎಸ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಎಂ. ಬಾಲಕೃಷ್ಣ ರಾವ್, ಉದ್ಯಮಿ ಚಂದ್ರಕಲಾ ಪೈ, ನಿವೃತ್ತ ಬ್ಯಾಂಕ್ ಅಧಿಕಾರಿ ಕೆ ಗಣೇಶ್ ಭಕ್ತಾ, ಕನ್ಯಾನ ಭಾರತ ಸೇವಾಶ್ರಮದ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉಪಾಧ್ಯಕ್ಷ ಡಾ. ಆರ್. ಎನ್ ಶಾಸ್ತ್ರಿ, ಜತೆ ಕಾರ್ಯದರ್ಶಿ ಸರಿತಾ ಭಟ್, ಸರೋಜಿನಿ ಭಟ್ಟಾಚಾರ್ಯ, ಶಂಕರ ಭಟ್ಟಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಸೇವಾಶ್ರಮದ ಕಾರ್ಯದರ್ಶಿ ಎಸ್ ಈಶ್ವರ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು. ಪರಶುರಾಮ ವರದಿ ವಾಚಿಸಿದರು. ಅಧ್ಯಕ್ಷ ಡಿ. ಅನಂತ ಪೈ ವಂದಿಸಿದರು. ವರಲಕ್ಷ್ಮೀ ಹಾಗೂ ವೇದವ್ಯಾಸ ಕಾರ್ಯಕ್ರಮ ನಿರೂಪಿಸಿದರು.