ವಿಟ್ಲ

40 ಎಕ್ರೆ ರಬ್ಬರ್, ಗೇರು ತೋಟಕ್ಕೆ ಬೆಂಕಿ

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ನಾಟೆಕಲ್ಲು ಮತ್ತು ಕಟ್ಟತ್ತಿಲದಲ್ಲಿ ನಡೆದ ಘಟನೆ

bantwalnews.com report

ಜಾಹೀರಾತು

ಕೊಳ್ನಾಡು ಗ್ರಾಮದ ನಾಟೆಕಲ್ಲು ಮತ್ತು ಕಟ್ಟತ್ತಿಲ ಎಂಬಲ್ಲಿ ಸುಮಾರು 40 ಎಕರೆ ರಬ್ಬರ್ ಮತ್ತು ಗೇರು ಕೃಷಿ ಭೂಮಿಯ ತೋಟದ ವ್ಯಾಪ್ತಿ ಅಗ್ನಿಯ ಕೆನ್ನಾಲಗೆಗೆ ಭಸ್ಮವಾಗಿವೆ. . ಈ ಭಾಗದಲ್ಲಿ ಕಳೆದ ವರ್ಷವೂ ಬೆಂಕಿ ಅವಗಡ ಸಂಭವಿಸಿ ಸುಮಾರು 20 ಎಕ್ರೆ ಯಷ್ಟು ಹಾನಿಯಾಗಿತ್ತು. ಬುಧವಾರ ಈ ಘಟನೆ ನಡೆದಿದೆ.

ರಸ್ತೆಯ ಬದಿಯಲ್ಲಿ ಧೂಮಪಾನ ಮಾಡಿ ಎಸೆದು ಅಥವಾ ವಿದ್ಯುತ್ ಶಾರ್ಟ್ ಸಕ್ಯೂಟ್ ನಿಂದ ಉಂಟಾದ ಕಿಡಿಯಿಂದ ಬೆಂಕಿ ಹತ್ತಿಕೊಂಡಿರಬಹುದೆಂದು ಅಂದಾಜಿಸಲಾಗಿದೆ. ನಾಗರೀಕರೇ ಮುಖ್ಯ ರಸ್ತೆಗೆ ತೆರಳಿ ಅಗ್ನಿಶಾಮಕದವರನ್ನು ಕರೆದು ತರಬೇಕಾದ ಪರಿಸ್ಥಿತಿ ಎದುರಾಗಿದೆ. 10 ನಿಮಿಷ ತಡವಾಗಿದ್ದರೆ ಸುಮಾರು 15 ಮನೆಗಳು ಬೆಂಕಿಗೆ ಆಹುತಿಯಾಗುವ ಸಾಧ್ಯತೆ ಇತ್ತು.

ಏನಾಯಿತು?

ಸಾಲೆತ್ತೂರು ನಾಟೆಕಲ್ಲು ಭಾಗದಲ್ಲಿ ಎ ಎಚ್ ಮಹಮ್ಮದ್ ಹಾಜಿ ಅವರಿಗೆ ಸಂಬಂಧಿಸಿದ ರಬ್ಬರ್ ತೋಟಕ್ಕೆ ಬೆಳಗ್ಗೆ ಸುಮಾರು 11ರ ಬಳಿಕ ಬೆಂಕಿ ಬಿದ್ದು, ಸುಮಾರು 4 ವರ್ಷದ ರಬ್ಬರ್ ಸಸಿಗಳು ಬೆಂಕಿಗೆ ಆಹುತಿಯಾದೆ. ಸಾರ್ವಜನಿಕರು ನಂದಿಸುವ ಪ್ರಯತ್ನ ಮಾಡಿದರಾದರೂ ಗಾಳಿಯ ರಭಸಕ್ಕೆ ಬೆಂಕಿ ಹರಡಿತು. ಮಧ್ಯಾಹ್ನದ ಬಳಿಕ ಕಟ್ಟತ್ತಿಲ ಭಾಗದ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪುರುಷೋತ್ತಮ ಶೆಟ್ಟಿ ಕಟ್ಟತ್ತಿಲ, ಬದಿಯಾರು ಬಾಬು ಶೆಟ್ಟಿ, ಸುಮಾ ಎಂ ಅಡ್ಯಾಂತಾಯ ಅಗರಿ ಕಟ್ಟತ್ತಿಲ್ಲ ಎಂಬವರ ತಲಾ 2 ಎಕರೆ ಗುಡ್ಡದಲ್ಲಿ ಗೇರು ಸಸಿ ಸೇರಿ ಬೇರೆ ಬೇರೆ ಜಾತಿ ಮರಗಳು ಬೆಂಕಿಗೆ ಹಾನಿಯಾಗಿದೆ. ಸ್ಥಳೀಯ ಯುವಕರ ಪರಿಶ್ರಮದಿಂದ ಬೆಂಕಿ ಆರಿಸುವಲ್ಲಿ ಯಶಸ್ವಿಯಾದರು. ಬಂಟ್ವಾಳ ಹಾಗೂ ಮಂಗಳೂರಿನ ಅಗ್ನಿಶಾಮಕಗಳು ಸ್ಥಳಕ್ಕಾಗಮಿಸಿ ಹೆಚ್ಚುವರಿಯಾಗದಂತೆ ತಡೆಯುವ ಪ್ರಯತ್ನ ನಡೆಸಿದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ನಾಟೆಕಲ್ಲು ನಿವಾಸಿ ಅಬ್ದುಲ್ ರಹಿಮಾನ್ ದೂರು ನೀಡಿದ್ದಾರೆ. ಇದೇ ಸಂದರ್ಭ ವಿಟ್ಲ ಠಾಣೆಗೂ ಕರೆ ಮಾಡಿ ಬೆಂಕಿ ಹಿಡಿದಿರುವ ಬಗ್ಗೆ ಮಾಹಿತಿ ನೀಡಿ ಬೆಂಕಿ ನಂದಿಸಲು ತುರ್ತಾಗಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.