ಡಿ ಗ್ರೂಫ್ ಸ್ಪೋಟ್ಸ್ ಕ್ಲಬ್ ವಿಟ್ಲ ಹಾಗೂ ದ.ಕ ಅಮೆಚೂರು ಕಬಡ್ಡಿ ಅಸೋಸಿಯೇಶನ್ ವತಿಯಿಂದ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಸಮಾರಂಭ ಜ.14 ರಂದು ವಿಟ್ಲದ ಸರ್ಕಾರಿ ಮಾದರಿ ಶಾಲೆಯಲ್ಲಿ ನಡೆಯಲಿದೆ.
ಮಲಯಾಲಂ ಚಲನಚಿತ್ರ ನಟಿ ಡಾ. ದಿಶಾ ದಿನಕರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಬಹುಭಾಷ ಚಲನಚಿತ್ರ ನಟ ಮನೋಜ್, ವಿಟ್ಲ ಪಟ್ಟಣ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಸದಸ್ಯ ಅಬೂಬಕ್ಕರ್ ಒಕ್ಕೆತ್ತೂರು, ದ.ಕ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಲುಕ್‌ಮಾನ್, ವಿಟ್ಲ ಎಸೈ ನಾಗರಾಜ್, ವಿಟ್ಲ ಸರ್ಕಾರಿ ಶಾಲೆಯ ಉಪ ಮುಖ್ಯೋಪಾಧ್ಯಾಯ ವಿಶ್ವನಾಥ, ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಕಲಂದರ್ ಪರ್ತಿಪ್ಪಾಡಿ, ಕ್ಯಾಂಪಸ್ ಫ್ರೆಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯ ರಿಯಾಜ್ ಕಡಂಬು, ಮಂಗಳೂರು ಬ್ಲಡ್ ಡೋನರ್‍ಸ್‌ನ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಡಿ ಗ್ರೂಫ್ ಅಧ್ಯಕ್ಷ ಹಂಝ ವಿಟ್ಲ, ಡಿ ಗ್ರೂಫ್ ಸ್ಪೋಟ್ಸ್ ಕ್ಲಬ್‌ನ ಅಧ್ಯಕ್ಷ ವಿ.ಕೆ.ಎಂ ಹಂಝ ಭಾಗವಹಿಸಲಿದ್ದಾರೆ.
ಚಿನ್ನದ ಪದಕ ವಿದ್ಯಾರ್ಥಿ ನವಾಝ್ ವಿ.ಎಚ್, ರಾಷ್ಟ್ರೀಯ ಕಬಡ್ಡಿ ಪಟುಗಳಾದ ಭರತ್ ಆಳ್ವಾಸ್ ಹಾಗೂ ರಶೀದ್ ಬನಾರಿ, ಬ್ಲಾಕ್ ಬೆಲ್ಟ್ ವಿಜೇತೆ ಜಾಸ್ಮೀನ್ ವೇಗಸ್, ರಾಜ್ಯ ಈಜುಪಟುಗಳಾದ ಗೋಪಿಕಾ ಶೆಣೈ ಹಾಗೂ ಲಕ್ಷ್ಮೀ ಅವರನ್ನು ಸನ್ಮಾನಿಸಲಾಗುವುದು.
ವಿಜೇತ ತಂಡಗಳಿಗೆ 12222 ಪ್ರಥಮ, 8222 ದ್ವಿತೀಯ, 5222 ತೃತೀಯ ಹಾಗೂ 2222 ನಗದು ಹಾಗೂ ಟ್ರೋಫಿ ಬಹುಮಾನ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…