ಅಳಿಕೆ ದರ್ಬೆ ಯುವಜನ ಸೇವಾ ಟ್ರಸ್ಟ್, ಕಾನತ್ತಡ್ಕ ವಿಶ್ವಕರ್ಮ ಸಮಾಜ ಸೇವಾ ಸಮಿತಿ, ಉಕ್ಕುಡ ಕಟ್ಟೆ ಶ್ರೀ ಧೂಮಾವತೀ ಗೆಳೆಯರ ಬಳಗದ ಜಂಟಿ ಆಶ್ರಯದಲ್ಲಿ ರೋಟರೀ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು, ವೆನ್‌ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ದರ್ಬೆ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಸಮುದಾಯ ಭವನದಲ್ಲಿ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಅಳಿಕೆ ಪ್ರಾಥಮಿಕ ಆರೋಗ್ಯಕೇಂದ್ರದ ಡಾ. ಜಯಪ್ರಕಾಶ್ ಕೆ. ನಡೆಸಿದರು. ಪುತ್ತೂರು ರೋಟರೀ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ರಾಮಚಂದ್ರ ಭಟ್ ಮಾಹಿತಿ ನೀಡಿದರು. ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಉಪಸ್ಥಿತರಿದ್ದರು.
ಅಳಿಕೆ ದರ್ಬೆ ಯುವಜನ ಸೇವಾ ಟ್ರಸ್ಟ್, ಕಾನತ್ತಡ್ಕ ವಿಶ್ವಕರ್ಮ ಸಮಾಜ ಸೇವಾ ಸಮಿತಿ, ಉಕ್ಕುಡ ಕಟ್ಟೆ ಶ್ರೀ ಧೂಮಾವತೀ ಗೆಳೆಯರ ಬಳಗದ ಅಧ್ಯಕ್ಷರು, ಸರ್ವ ಸದಸ್ಯರು ಹಾಜರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…