ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೋತ್ಸವ ಜ.14ರಿಂದ ಧ್ವಜಾರೋಹಣಗೊಂಡು ಜ.22ರವರೆಗೆ ಉತ್ಸವಾದಿಗಳು ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ, ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಹೇಳಿದರು.
bantwalnews.com report
ಜ.13ರಂದು ಸಂಜೆ ೬ಕ್ಕೆ ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತಿಯಲ್ಲಿ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಸೀಮೆಯ ಪ್ರತಿ ಮನೆಯಿಂದ, ಫಲವಸ್ತುಗಳ ಜತೆಯಲ್ಲಿ ಹೊರೆಕಾಣಿಕೆಯಲ್ಲಿ ಭಾಗವಹಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಅವರು ವಿನಂತಿಸಿದರು.
ಜ.14ರಂದು 10 ಗಂಟೆಗೆ ಧ್ವಜಾರೋಹಣ, ಸಂಜೆ 6ಕ್ಕೆ ಬಸದಿಯಿಂದ ಭಜನಾ ಉಲ್ಪೆ ಮೆರವಣಿಗೆ, ರಾತ್ರಿ 8.30 ರಿಂದ ಲಕ್ಷದೀಪೋತ್ಸವ ನಡೆಯಲಿದ್ದು ಭಕ್ತಾದಿಗಳು 5 ಹಣತೆಗಳೊಂದಿಗೆ ಆಗಮಿಸಿ ದೇವಾಲಯದ ಸುತ್ತ ಹಣತೆ ಹಚ್ಚಿ ದೀಪೋತ್ಸವದಲ್ಲಿ ಭಾಗವಹಿಸಬೇಕು.
ಜ.15ರಂದು ಸಂಜೆ 6.30 ಕ್ಕೆ ನಿತ್ಯೋತ್ಸವ ನಡೆಯಲಿದ್ದು, ಜ.16 ರಂದು ಸಂಜೆ ೬ ೩೦ಕ್ಕೆ ನಿತ್ಯೋತ್ಸವ ನಡೆಯಲಿದೆ.
ಜ.17ರಂದು ಸಂಜೆ ನಿತ್ಯೋತ್ಸವ, ಜ.18ರಂದು ರಾತ್ರಿ 8.30 ಕ್ಕೆ ಕೇಪುನಿಂದ ಶ್ರೀ ಮಲರಾಯ ದೈವದ ಭಂಡಾರ ಬರಲಿದ್ದು, 9 ಕ್ಕೆ ಬಯ್ಯದ ಬಲಿ ಉತ್ಸವ ನಡೆಯಲಿದೆ. ಜ.19 ರಂದು ಬೆಳಗ್ಗೆ 9.30 ಕ್ಕೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ ೮ಕ್ಕೆ ನಡು ದೀಪೋತ್ಸವ ನಡೆಯಲಿದ್ದು, ಬಹು ವರ್ಷಗಳ ಬಳಿಕ ಈ ಬಾರಿ ವಿಶೇಷವಾಗಿ ತೆಪ್ಪೋತ್ಸವ ನಡೆಯಲಿದೆ.
ಜ.20ರಂದು ಬೆಳಗ್ಗೆ 5 ಕ್ಕೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 9ಕ್ಕೆ ಹೂತೇರು ನಡೆಯಲಿದೆ. ಜ. 21 ರಂದು ಬೆಳಗ್ಗೆ ದರ್ಶನ ಬಲಿ, ರಾಜಾಂಗಣದ ಬಟ್ಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 7.30 ಕ್ಕೆ ಕಡ್ಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಬರುವುದು, ರಾತ್ರಿ ೮ಕ್ಕೆ ಮಹಾ ರಥೋತ್ಸವ, ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ.
ಜ.22ರಂದು ಬೆಳಗ್ಗೆ 9 ಗಂಟೆಗೆ ಕವಟೋದ್ಘಾತನೆ, ಮಹಾಪೂಜೆ, ಕಾಲಾವಧಿ ಬಟ್ಲು ಕಾಣಿಕೆ, ತುಲಾಭಾರ ಸೇವೆ, ರಾತ್ರಿ 10ಕ್ಕೆ ಅವಭೃತ ಸ್ನಾನಕ್ಕೆ ಕೊಡಂಗಾಯಿಗೆ ಸವಾರಿ, ಧ್ವಜಾವರೋಹಣ, ಸಂಪ್ರೋಕ್ಷಣೆ ನಡೆಯಲಿದೆ.
ಜ.24ರಂದು ಮಧ್ಯಾಹ್ನ 1ಗಂಟೆಗೆ ಕೇಪುವಿನ ಶ್ರೀ ಮಲರಾಯಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ ನಡೆಯಲಿದೆ.ಜ. 26 ಕ್ಕೆ ಮಧ್ಯಾಹ್ನ 2 ಗಂಟೆಗೆ ಅರಮನೆಯಲ್ಲಿ ನೇಮೋತ್ಸವ ಬಳಿಕ ಕೇಪಿಗೆ ಭಂಡಾರ ಹೊರಡುವುದು. ಜ.25 ರಂದು ಎಂದು ತಿಳಿಸಿದರು.
ಭಕ್ತ ವೃಂದದ ಗೋವರ್ಧನ್ ಇಡ್ಯಾಳ, ಜಗದೀಶ್ ಪಾಣೆಮಜಲು, ಶ್ರೀಕೃಷ್ಣ, ಸೇಸಪ್ಪ ಬೆದ್ರಕಾಡು ಉಪಸ್ಥಿತರಿದ್ದರು.