ಪುಂಜಾಲಕಟ್ಟೆ

ಮೂರು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ ಪುಂಜಾಲಕಟ್ಟೆಯಲ್ಲಿ

ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ಆಶ್ರಯದಲ್ಲಿ ,ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಇವರ ಸಹಕಾರದೊಂದಿಗೆ ದ.ಕ.,ಉಡುಪಿ,ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ ಜ.14 ರಿಂದ ಜ.21 ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಲಿದೆ.

bantwalnews.com report

ಜ.14ರಂದು ಶನಿವಾರ ಉದ್ಘಾಟನಾ ಸಮಾರಂಭ ನಡೆಯಲಿದ್ದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಲಿರುವರು. ಆಕಾಶವಾಣಿ ನಿವೃತ್ತ ಅದಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಅಧ್ಯಕ್ಷ  ಮುದ್ದು ಮೂಡುಬೆಳ್ಳೆ ಅವರು ಉದ್ಘಾಟಿಸಲಿರುವರು.

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ಫಾ| ಲಾರೆನ್ಸ್ ಮಸ್ಕರ್‍ಹೇನಸ್, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ,ಉದ್ಯಮಿ ಶಿವರಾಮ ಮಯ್ಯ,ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್,ಎಂ.ತುಂಗಪ್ಪ ಬಂಗೇರ, ಚಂದ್ರಪ್ರಕಾಶ್ ಶೆಟ್ಟಿ, ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ,ಉದ್ಯಮಿ ಸುಂದರ್‌ರಾಜ್ ಹೆಗ್ಡೆ,ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್,ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ಪ್ರಗತಿಪರ ಕೃಷಿಕ ಉದಯ್ ಕುಮಾರ್ ಕಟ್ಟೆಮನೆ,ಜಿಲ್ಲಾ ತುಳು ನಾಟಕ ಕಲಾವಿದರ ಸಂಘದ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ,ಬಂಟ್ವಾಳ ಬೂಡಾ ನಿಕಟಪೂರ್ವ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್,ದ.ಕ.,ಉಡುಪಿ ಜಿಲ್ಲೆ ಹಾಪ್‌ಕಾಮ್ಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ,ನ್ಯಾಯವಾದಿ ಸ್ವರ್ಣಲತಾ ಹೆಗ್ಡೆ,ಉದ್ಯಮಿಗಳಾದ ದಿನೇಶ್ ಶೆಟ್ಟಿ ಮಜಲೋಡಿ, ಹರೀಂದ್ರ ಪೈ,ಧೀರಜ್ ನಾಯಕ್,ಸಂಘದ ಸ್ಥಾಪಕಾಧ್ಯಕ್ಷ ಪದ್ಮ ಮೂಲ್ಯ ಅನಿಲಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಇದೇ ವೇಳೆ ನಿವೃತ್ತ ಅಧ್ಯಾಪಕ,ಕಲಾವಿದ,ನಾಟಕ ನಿರ್ದೇಶಕ ರಮಾ ಬಿ.ಸಿ.ರೋಡ್ ಅವರನ್ನು ಸಮ್ಮಾನಿಸಲಾಗುವುದು.

ಜ.21ರಂದು ಶನಿವಾರ ಸಂಜೆ ಗಂಟೆ 7ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಬೆಳ್ತಂಗಡಿ ವಿಧಾನ ಸಭಾ ಶಾಸಕ ವಸಂತ ಬಂಗೇರ ಅವರು ಅಧ್ಯಕ್ಷತೆ ವಹಿಸುವರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಅವರು ಬಹುಮಾನ ವಿತರಿಸುವರು. ಚಲನಚಿತ್ರ ನಿರ್ಮಾಪಕ ವಿಜಯ ಕುಮಾರ್ ಕೊಡಿಯಾಲ್‌ಬಲ್,ಉದ್ಯಮಿ ವಿನು ವಿಶ್ವನಾಥ ಶೆಟ್ಟಿ ಕರಿಂಜೆ,ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್,ಗ್ರಾ.ಪಂ.ಅಧ್ಯಕ್ಷ ಗೋಪಾಲಕೃಷ್ಣ,ಬಳ್ಳಮಂಜ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ|ಹರ್ಷ ಸಂಪಿಗೆತ್ತಾಯ,ತಾ.ಪಂ.ಸದಸ್ಯ ರಮೇಶ ಕುಡ್ಮೇರು, ಬಿಕರ್ನಕಟ್ಟೆ ಇನೆಂಟ್ ಜೀಸಸ್ ಚರ್ಚ್ ಫಾ| ವಿಲಿಯಂ ಮಿರಾಂದ,ಉದ್ಯಮಿಗಳಾದ ಹೇಮಂತ್ ಕುಮಾರ್,ವಾಸುದೇವ ಭಟ್,ಓಂ ಪ್ರಸಾದ್, ಸಿಲ್ವೆಸ್ಟರ್ ಪಿಂಟೋ,ಪುಂಜಾಲಕಟ್ಟೆ ಸ್ವಸ್ತಿಕ್ ಅಧ್ಯಕ್ಷ ಪ್ರಶಾಂತ್ ಎಂ.,ಬಂಟ್ವಾಳ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ್ ಕಾರಂತ್,ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಬಂಧಕ ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ,ಪಿಲಾತಬೆಟ್ಟು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಂದರ ನಾಯ್ಕ,ಕಂಬಳ ಪ್ರಧಾನ ತೀರ್ಪುಗಾರ ರಾಜೀವ ಶೆಟ್ಟಿ ಎಡ್ತೂರು,ಪ್ರಗತಿಪರ ಕೃಷಿಕ ಬಾಲಯ್ಯ ಹೆಗ್ಡೆ ಬದ್ಯಾರು, ಸ್ವರ್ಣೋಧ್ಯಮಿ ಲೋಕೇಶ್ ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.        ಇದೇ ವೇಳೆ ಬಂಟ್ವಾಳ ತಾಲೂಕು ಬ್ಯಾರಿ ಫೌಂಡೇಶನ್ ಅಧ್ಯಕ್ಷ ,ನಾಟಕ ಕಲಾವಿದ ಪಿ.ಎ.ರಹೀಮ್ ಅವರನ್ನು ಸಮ್ಮಾನಿಸಲಾಗುವುದು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts