ಸಾಮಾನ್ಯವಾಗಿ ಕೃಷಿ ಉತ್ಸವ ಎಂದರೆ ಅಲ್ಲಿ ಕೃಷಿಕರಿಗೆ ಬೇಕಾದ ಯಂತ್ರೋಪಕರಣಗಳು, ಮಾಹಿತಿ ಕೈಪಿಡಿ, ವಸ್ತುಗಳು ಇರುತ್ತವೆ. ಬಿ.ಸಿ.ರೋಡಿನಲ್ಲಿ ನಡೆದ ಕೃಷಿ ಉತ್ಸವದಲ್ಲಿ ಈ ಎಲ್ಲಾ ವ್ಯವಸ್ಥೆಗಳ ಜೊತೆಗೆ ತುಳು ಬದುಕಿನ ಕಿರುಪರಿಚಯ ಕಂಡುಬಂತು. ಹಿಂದಿನ ಕಾಲದ ಮನೆಗಳು, ಅವುಗಳಲ್ಲಿನ ವೈವಿಧ್ಯ, ಕಂಬಳ, ಕೋಳಿ, ಹಸು…. ಹೀಗೆ ವಿಧವಿಧದ ತುಳುಬದುಕಿನ ದೃಶ್ಯಗಳು ಕೃಷಿ ಉತ್ಸವದಲ್ಲಿ ಬಂದ ಜನರಿಗೆ ದೊರಕಿತು.
ಕೃಷಿ ಯಂತ್ರೋಪಕರಣಗಳು, ಕೈಪಿಡಿಗಳು, ಸಾಲ ನೀಡಲು ಬ್ಯಾಂಕುಗಳ ಕೌಂಟರ್ , ಹಣ್ಣುಹಂಪಲು ಹೀಗೆ ವಿವಿಧ ಕೌಂಟರ್ ಗಳು ಆಕರ್ಷಿಸಿದವು. ಸರಕಾರಿ ಇಲಾಖೆಗಳ ಸವಲತ್ತು ಹೇಳುವ ಸ್ಟಾಲ್ ಗಳು ಇದ್ದವು. ಬಂದವರಿಗೆ ಬಾಯಾರಿಕೆ ಉಚಿತವಾಗಿ ನೀಡುವ ಸ್ವಸಹಾಯ ಸಂಘ ಸದಸ್ಯೆಯರ ಶ್ರಮಕ್ಕೆ ಮೆಚ್ಚುಗೆ ದೊರಕಿತು.