bantwalnews.com report
ಸುಬ್ರಹ್ಮಣ್ಯ – ಮಂಜೇಶ್ವರ ಹೆದ್ದಾರಿಯ ಮಡೆಯಾಲದಲ್ಲಿ ಸೇತುವೆ ಪುನರ್ ನಿರ್ಮಾಣ ಕಾರ್ಯದ ಹಿನ್ನಲೆಯಲ್ಲಿ ಬದಲಿ ರಸ್ತೆ ವ್ಯವಸ್ಥೆ ಮಾಡುವಂತೆ ಹಾಗೂ ಈ ಹಿನ್ನೆಲೆಯಲ್ಲಿ ಪಡಿಬಾಗಿಲು – ಬೈರಿಕಟ್ಟೆ ನಡುವೆ ವಾಹನ ಸಂಚಾರ ನಿಷೇಧಿಸಿ ಆದೇಶ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ಸುಬ್ರಹ್ಮಣ್ಯ ಮಂಜೇಶ್ವರ ರಾಝ್ಯ ಹೆದ್ದಾರಿ 100ರ 80.60ಕಿಮೀ ಯಲ್ಲಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲು ಹಳೆ ಸೇತುವೆಯನ್ನು ಕೆಡವಬೇಕಾಗಿದೆ. ಈ ಪ್ರದೇಶದಲ್ಲಿ ಇಳಿಜಾರು ಇರುವುದರಿಂದ ಬದಲಿ ರಸ್ತೆ ನಿರ್ಮಾಣಕ್ಕೂ ಸಮಸ್ಯೆಗಳಿದೆ. ಇದರಿಂದ 2017ರ ಜೂನ್ 6ರವರೆಗೆ (ಕಾಮಗಾರಿ ಪೂರ್ಣಗೊಳ್ಳುವವರೆಗೆ) ಪಡಿಬಾಗಿಲುವಿನಿಂದ ಉಕ್ಕುಡಕ್ಕೆ ತೆರಳಿ ಕನ್ಯಾನ ಸಂಚರಿಸುವಂತೆ ಅಧಿಸೂಚನೆ ಹೊರಡಿಸಲು ಲೋಪೋಪಯೋಗಿ ಇಲಾಖೆ ಜಿಲ್ಲಾಡಳಿತಕ್ಕೆ ಕೇಳಿಕೊಂಡಿತ್ತು.
ಜಿಲ್ಲಾಧಿಕಾರಿ ಡಾ. ಕೆ ಜಿ ಜಗದೀಶ್ ಮೋಟಾರು ಕಾಯ್ದೆ 1988ರ ಸೆಕ್ಷನ್ 115 ಹಾಗೂ 1989ರ ನಿಯಮ 221ಎ(5)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ಪಡಿಬಾಗಿಲು – ಬೈರಿಕಟ್ಟೆ ನಡುವೆ ವಾಹನ ಸಂಚಾರ ನಿಷೇಧಿಸಿ ಅಧಿಸೂಚನೆ ಹೊರಡಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್, ಮಂಗಳೂರು ಪೊಲೀಸ್ ಅಧೀಕ್ಷಕರು, ಉಪ ಸಾರಿಗೆಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಡಳಿತದ ಕಡೆಯಿಂದ ಸೂಕ್ತ ಕ್ರಮಕ್ಕಾಗಿ ಅಧಿಸೂಚನೆ ಪ್ರತಿ ಕಳುಹಿಸಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…