bantwalnews.com report
ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲು ಸಮೀಪ ನಾಲ್ವರು ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ತಾಲೂಕಿನ ನಡ ಗ್ರಾಮದ ಅಂತ್ರಾಯಿಪಲ್ಕೆ ಹೊಳೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಒಂದೇ ಕುಟುಂಬದ ರಹೀಂ, ಅವರ ಪತ್ನಿ ರುಬೀನಾ , ಯಾಸ್ಮೀನ್ , ಸುಬಾನ್ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟವರು.
ಎಲ್ಲರೂ ಉಡುಪಿ ಜಿಲ್ಲೆಯ ಕಾಪು ಪಕೀರನಕಟ್ಟೆ ನಿವಾಸಿಗಳಾಗಿದ್ದು, ಬುಧವಾರ ಬೆಳಗ್ಗೆ ಕಾಜೂರು ದರ್ಗಾಕ್ಕೆ ಭೇಟಿ ನೀಡಿ ಬರುವ ಸಂದರ್ಭ ಹೊಳೆಗೆ ಸ್ನಾನ ಮಾಡಲು ಇಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೈಮೂನಾ ಎಂಬಾಕೆ ಅಪಾಯದಿಂದ ಪಾರಾಗಿದ್ದು, ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಡಿವೈಎಸ್ಪಿ ರವೀಶ್.ಸಿ.ಆರ್. ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…