ಬಂಟ್ವಾಳ

ಎಪಿಎಂಸಿ 12 ಕ್ಷೇತ್ರಗಳು, 25 ಅಭ್ಯರ್ಥಿಗಳು

  • ಬಂಟ್ವಾಳ ಎಪಿಎಂಸಿಗೆ ಗುರುವಾರ ಚುನಾವಣೆ
  • 11 ಕ್ಷೇತ್ರಗಳಲ್ಲಿ ನಡೆಯುತ್ತಿದೆ ನೇರ ಸ್ಪರ್ಧೆ
  • ಮನೆಮನೆಗೆ ತೆರಳಿ ಚುನಾವಣಾ ಪ್ರಚಾರ

bantwalnews.com report

ಕೋರ್ಟು ತಡೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಬಂಟ್ವಾಳ ಏಪಿಎಂಸಿ ಚುನಾವಣೆ ಗುರುವಾರ ನಡೆಯಲಿದೆ. 13ರಂದು ಅವಶ್ಯವಿದ್ದಲ್ಲಿ ಮರುಮತದಾನ, 14ರಂದು ಮತ ಎಣಿಕೆ ನಡೆಯಲಿದೆ. ಕಣದಲ್ಲಿದ್ದಾರೆ ಒಟ್ಟು 25 ಅಭ್ಯರ್ಥಿಗಳು.

ಜಾಹೀರಾತು

ಒಟ್ಟು 12 ಸದಸ್ಯ ಬಲದ ಎಪಿಎಂಸಿಯಲ್ಲಿ ಕಳೆದ ಬಾರಿ ಬಿಜೆಪಿ 8, ಕಾಂಗ್ರೆಸ್ 4 ಸದಸ್ಯರನ್ನು ಹೊಂದಿತ್ತು.ಇವೆಲ್ಲವೂ ಪಕ್ಷದ ಆಧಾರದಲ್ಲಿ ಅಲ್ಲವಾದರೂ ಗೆದ್ದವರು ಯಾವುದಾದರೂ ರಾಜಕೀಯ ಪಕ್ಷಗಳ ಸದಸ್ಯರೇ ಆಗಿರುತ್ತಾರೆ. ಕ್ಷೇತ್ರಗಳು ಹಾಗು ಕಣದಲ್ಲಿರುವವರ ವಿವರ ಹೀಗಿವೆ. 1. ಸಂಗಬೆಟ್ಟು (ಸಾಮಾನ್ಯ, ಮತದಾರರು-3997), ಅಭ್ಯರ್ಥಿಗಳು: ಪದ್ಮರಾಜ ಬಲ್ಲಾಳ ಮಾವಂತೂರು ಮತ್ತು ವಸಂತ ಕುಮಾರ ಅಣ್ಣಳಿಕೆ 2. ಚನ್ನೈತೋಡಿ (ಸಾಮಾನ್ಯ ಮಹಿಳೆ, ಮತದಾರರು-3903), ಅಭ್ಯರ್ಥಿಗಳು: ಭಾರತಿ ಎಸ್. ರೈ ಪಡಂತರಕೋಡಿ ಮತ್ತು ಮಲ್ಲಿಕಾ ಅಜಿತ್ ಶೆಟ್ಟಿ. 3. ಅಮ್ಟಾಡಿ (ಹಿ.ವ.ಅ, ಮತದಾರರು-4715), ಅಭ್ಯರ್ಥಿಗಳು:ದಿವಾಕರ ಪಂಬದಬೆಟ್ಟು, ರಮೇಶ ಪೂಜಾರಿ ಬಟ್ಟಾಜೆ. 4. ಕಾವಳಮೂಡೂರು (ಸಾಮಾನ್ಯ, ಮತದಾರರು-4346), ಅಭ್ಯರ್ಥಿಗಳು: ವಿಶ್ವನಾಥ ಸಾಲಿಯಾನ್ ಬಿತ್ತ, ಹರಿಶ್ಚಂದ್ರ ಪೂಜಾರಿ ಕಜೆಕಾರು. 5. ಕೊಳ್ನಾಡು (ಹಿ.ವ.ಬಿ.,ಮತದಾರರು-3890), ಅಭ್ಯರ್ಥಿಗಳು:ಬಿ.ಚಂದ್ರಶೇಖರ ರೈ, ಯೋಗೀಶ ಆಳ್ವ ಪುದ್ದೋಟು. 6. ಅಳಕೆ(ಹಿ.ವ.ಬಿ.ಮಹಿಳೆ, ಮತದಾರರು-4054), ಅಭ್ಯರ್ಥಿಗಳು: ಗೀತಾಲತಾ ಟಿ.ಶೆಟ್ಟಿ, ಕೆ.ಭವಾನಿ ರೈ. 7. ಕೆದಿಲ(ಅನುಸೂಚಿತ ಪಂಗಡ, ಮತದಾರರು-3946), ಅಭ್ಯರ್ಥಿಗಳು: ಜಗದೀಶ ಡಿ, ಸುಂದರ ನಾಯ್ಕ. 8. ಮಾಣಿ(ಸಾಮಾನ್ಯ, ಮತದಾರರು-4768), ಅಭ್ಯರ್ಥಿಗಳು: ಬಿ.ನೇಮಿರಾಜ ರೈ, ಬಾಲಕೃಷ್ಣ ಆಳ್ವ. 9. ಕಡೇಶ್ವಾಲ್ಯ (ಸಾಮಾನ್ಯ , ಮತದಾರರು-3772), ಅಭ್ಯರ್ಥಿಗಳು: ಚಂದ್ರಶೇಖರ ಪೂಜಾರಿ, ಆರ್. ಚೆನ್ನಪ್ಪ ಕೋಟ್ಯಾನ್. 10. ಪಾಣೆಮಂಗಳೂರು (ಸಾಮಾನ್ಯ , ಮತದಾರರು-4004), ಅಭ್ಯರ್ಥಿಗಳು: ಅರವಿಂದ ಭಟ್, ಕೆ. ಪದ್ಮನಾಭ ರೈ. 11. ತುಂಬೆ (ಅನುಸೂಚಿತ ಜಾತಿ,ಮತದಾರರು-4402), ಅಭ್ಯರ್ಥಿಗಳು: ಚಂದ್ರಹಾಸ, ಪದ್ಮನಾಭ ನರಿಂಗಾನ, ವಿಠಲ ಸಾಲ್ಯಾನ್. 12. ವರ್ತಕರ ಕ್ಷೇತ್ರ (ಮತದಾರರು-204) ಅಭ್ಯರ್ಥಿಗಳು: ಬಾಲಕೃಷ್ಣ ಆಳ್ವ, ಎಸ್.ಎಂ.ಹುಸೈನ್.

ಚುನಾವಣೆ ಪ್ರಯುಕ್ತ ಬುಧವಾರ ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಮಸ್ಟರಿಂಗ್ ನಡೆಯಿತು.

ಬಂಟ್ವಾಳ ತಾಲೂಕು ಎಪಿಎಂಸಿ ಒಟ್ಟು 50180 ಮಂದಿ ಮತದಾರರನ್ನು ಹೊಂದಿದೆ. ತಾಲೂಕಿನಲ್ಲಿ ಒಟ್ಟು 53 ಮತಗಟ್ಟೆಗಳನ್ನು ಹೊಂದಿದ್ದು ಒಂದು ಅಂಗನವಾಡಿ, ನಾಲ್ಕು ಶಾಲೆ, ತಲಾ ಒಂದು ಪಟ್ಟಣ ಪಂಚಾಯತ್ ಹಾಗೂ ಪುರಸಭೆ ಉಳಿದಂತೆ ಆಯಾಯ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮತದಾನ ನಡೆಯಲಿದೆ. ಬಂಟ್ವಾಳ ಎಪಿಎಂಸಿಯ ಮತ ಎಣಿಕೆ ಮೊಡಂಕಾಪು ಇನ್ಫೆಂಟ್ ಜೀಸಸ್ ಕಾಲೇಜಿನಲ್ಲಿ ನಡೆಯಲಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts