ಆಳ್ವಾಸ್ ವಿರಾಸತ್ 2017 ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನಕ್ಕೆ ಪೂರಕವಾಗಿ ಆಳ್ವಾಸ್ ವರ್ಣವಿರಾಸತ್ 2017 ರಾಷ್ಟ್ರೀಯ ಚಿತ್ರಕಲಾ ಶಿಬಿರಕ್ಕೆ ಬುಧವಾರ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಚಾಲನೆ ನೀಡಲಾಯಿತು.
ಕೋಟೇಶ್ವರ ಗುರುಕುಲ ಪಬ್ಲಿಕ್ ಸ್ಕೂಲ್‌ನ ಮ್ಯಾನಜೀಂಗ್ ಟ್ರಸ್ಟಿ ಅನುಪಮ ಹೆಗ್ಡೆ ವರ್ಣವಿರಾಸತ್‌ಗೆ ಚಾಲನೆ ನೀಡಿದರು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯ ಕಲೆ ಮತ್ತು ಸಂಸ್ಕೃತಿ ಅತ್ಯಂತ ಪ್ರಾಚೀನವಾದುದು. ಪ್ರತಿಯೊಬ್ಬರಲ್ಲೂ ಆಲೋಚನಾ ಶಕ್ತಿ ಇದೆ, ಆಲೋಚನಾ ಶಕ್ತಿ ಕೌಶಲ್ಯ ಶಕ್ತಿಯಾಗಿ ರೂಪುಗೊಂಡರೆ ಶಿಲ್ಪ ಅಥವಾ ವರ್ಣಶಕ್ತಿಯ ರೂಪದಲ್ಲಿ ವ್ಯಕ್ತವಾಗುತ್ತದೆ. ಎಲ್ಲರೂ ಕಲೆಯ ಬಗ್ಗೆ ಆಸಕ್ತಿ ವಹಿಸಬೇಕಾಗಿದೆ. ಅದು ಕೇವಲ ಒಬ್ಬರಲ್ಲಿ ಬೇರೂರದೆ ಅದರ ಇಂಪು ಪ್ರತಿಯೊಬ್ಬರ ಮನಸ್ಸಿನಲ್ಲೂ ಪಸರಿಸಬೇಕಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆವಹಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ, ಶಿಬಿರದ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ ಹಿರಿಯ ಚಿತ್ರ ಕಲಾವಿದ ದೇವುದಾಸ್ ಶೆಟ್ಟಿ ಅವರ ಜೀವನಚರಿತ್ರೆ ‘ಮಾಸ್ಟರ್ ಸ್ಟ್ರೋಕ್ ಅನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಬಿಡುಗಡೆಗೊಳಿಸಿದರು.
ಕಲಾವಿದರಿಗೆ ಕುಂಚ ಪರಿಕರಗಳನ್ನು ನೀಡಿ ಶಿಬಿರದ 20 ಮಂದಿ ಕಲಾವಿದರನ್ನು ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ಜಯಶ್ರೀ ಅಮರನಾಥ್ ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ವಿದ್ಯಾರ್ಥಿ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.