ಯುವ ಸಮುದಾಯಕ್ಕೆ ಸರಿಯಾದ ಮಾರ್ಗದರ್ಶನವನ್ನು ನೀಡಿ ದೇಶಕ್ಕೆ ಸತ್ಪ್ರಜೆಗಳನ್ನು ನೀಡುವ ನಿಟ್ಟಿನಲ್ಲಿ ಜೇಸಿಐ ಸಂಸ್ಥೆ ವಿಶಿಷ್ಟವಾದ ಕೆಲಸವನ್ನು ಮಾಡುತ್ತಿದೆ ಎಂದು ಪುರಸಭೆಯ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಹೇಳಿದ್ದಾರೆ.
ಬಿ.ಸಿ.ರೋಡಿನ ಜೋಡುಮಾರ್ಗ ಪಾರ್ಕ್‌ನಲ್ಲಿ ಶನಿವಾರ ಸಂಜೆ ನಡೆದ ಜೇಸಿಐ ಬಂಟ್ವಾಳದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ನ್ಯಾಯವಾದಿ ಅಶ್ವನಿಕುಮಾರ್ ರೈ ಮಾತನಾಡಿ ವ್ಯಕ್ತಿತ್ವ ವಿಕಸನವೇ ಜೇಸಿ ಮುಖ್ಯ ಉದ್ದೇಶ. ಇಂತಹ ಯುವಕರ ತಂಡದಿಂದ ಸಮಾಜದ ಅಭಿವೃದ್ದಿಯೂ ಸಾಧ್ಯ ಎಂದರು.
ವಲಯ 15ರ ವಲಯಾಧ್ಯಕ್ಷ ಸಂತೋಷ್ ಜಿ. ಮಾತನಾಡಿ ಕನಸಿಗೊಂದಷ್ಟು ಬಣ್ಣ ಎನ್ನುವ ಈ ವರ್ಷದ ವಲಯ ಧ್ಯೇಯವಾಕ್ಯದ ಮೂಲಕ ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಸಂತೋಷ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ವಲಯ ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಅಧ್ಯಕ್ಷ ಡಾ. ಬಾಲಕೃಷ್ಣ ಕುಮಾರ್ ಅಗ್ರಬೈಲು ಮತ್ತು ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋದಿಸಿದರು. 8 ಮಂದಿ ನೂತನ ಸದಸ್ಯರು ಈ ಸಂದರ್ಭ ಜೇಸಿಗೆ ಸೇರ್ಪಡೆಗೊಂಡರು.
ಬಂಟ್ವಾಳ ಪುರಸಭೆಯ ನಿರ್ಮಲ ಬಂಟ್ವಾಳ ಯೋಜನೆಯಡಿ ನಡೆಯುತ್ತಿರುವ ಸ್ವಚ್ಛತಾ ಆಂದೋಲನಕ್ಕೆ ಟೋಪಿಯನ್ನು ಪುರಸಭಾಧ್ಯಕ್ಷರಿಗೆ ಹಸ್ತಾಂತರಿಸುವ ಮೂಲಕ ಈ ವರ್ಷದ ಮೊದಲ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಿಕಟ ಪೂರ್ವಾಧ್ಯಕ್ಷ ಲೋಕೇಶ್ ಕರ್ಕೇರಾ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕೋಶಾಧಿಕಾರಿ ಕೀರ್ತಿರಾಜ್, ಹಾಗೂ ನಿಯೋಜಿತ ಕಾರ್ಯದರ್ಶಿ ಸದಾನಂದ ಬಂಗೇರಾ ಉಪಸ್ಥಿತರಿದ್ದರು. ಅಧ್ಯಕ್ಷ ಸಂತೋಷ್ ಜೈನ್ ಸ್ವಾಗತಿಸಿ, ಚೇತನ್ ಮುಂಡಾಜೆ ವಂದಿಸಿದರು. ನಾಗೇಶ್ ಬಾಳೆಹಿತ್ಲು, ಮನೋಹರ ನೇರಂಬೋಳು, ಸುರೇಶ್ ಕುಮಾರ್ ನಾವೂರು, ಮೋಹನ್, ಕಿಶೋರ್ ಕುಲಾಲ್, ಶಿವರಾಮ್, ಗಣೇಶ್ ದುಗನಕೋಡಿ, ಉಮೇಶ್ ಮೂಲ್ಯ, ಉಮೇಶ್ ಮಾರ್ನಬೈಲು, ಯತೀಶ್ ಕರ್ಕೆರಾ, ರಾಜೇಂದ್ರ, ದಯಾನಂದ ರೈ, ಕಿಶೋರ್ ಆಚಾರ್ಯ, ಪ್ರಕಾಶ್ ಸಹಕರಿಸಿದರು.