ಸೇವಾ ಮನೋಭಾವದ ಗೃಹ ರಕ್ಷಕ ಸಿಬ್ಬಂದಿಗಳ ಕಾರ್ಯ ವೈಖರಿಯಿಂದ ಪೊಲೀಸ್ ಇಲಾಖೆಯ ಜೊತೆಗೆ ತಾಲೂಕು ಆಡಳಿತಕ್ಕೆ ಹೆಚ್ಚಿನ ಬಲ ತಂದು ಕೊಟ್ಟಿದೆ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು.
ಬಂಟ್ವಾಳ ನಗರ ಠಾಣೆಯ ವಠಾರದಲ್ಲಿರುವ ಡಿವೈಎಸ್‌ಪಿ ಕಛೇರಿ ಕಟ್ಟಡದಲ್ಲಿ ತಾಲೂಕು ಗೃಹ ರಕ್ಷಕ ದಳದ ನೂತನ ಕಚೇರಿಯನ್ನು ಶುಕ್ರವಾರ ಬೆಳಿಗ್ಗೆ ಉದ್ಘಾಟಿಸಿದ ಅವರು ಬಳಿಕ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ರವಿ ಸಿ.ಆರ್., ನಗರ ಠಾಣೆಯ ಎಸ್ಸೈ ನಂದ ಕುಮಾರ್, ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ, ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ.ಮುರಳಿ ಮೋಹನ ಚುಂತಾರು, ಸ್ವಾತಂತ್ರ್ಯ ಹೋರಾಟಗಾರ ಶ್ಯಾಮ್ ರಾವ್ ಆಚಾರ್ಯ, ಬಂಟ್ವಾಳ ಗೃಹ ರಕ್ಷಕ ದಳದ ತರಬೇತಿ ಅಧಿಕಾರಿ ಶಿವಾರಾಜ ಎಸ್., ದ.ಕ.ಜಿಲ್ಲಾ ಗೃಹ ರಕ್ಷಕ ದಳದ ಸಹಾಯಕ ನಿಯಂತ್ರಾಣಾಧಿಕಾರಿ ರಮೇಶ್, ಘಟಕಾಧಿಕಾರಿ ಡಿ.ಆರ್.ಶ್ರೀನಿವಾಸ್ ಆಚಾರ್ಯ ಹಾಗೂ ಗೃಹ ರಕ್ಷಕ ದಳದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.